ADVERTISEMENT

ಹೊಸಕೋಟೆ: ಗಾಯಾಳು ವೈದ್ಯೆ ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:35 IST
Last Updated 29 ನವೆಂಬರ್ 2018, 20:35 IST

ಹೊಸಕೋಟೆ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯೆ ಪೂರ್ಣಿಮಾ ಶೇಖರ್ (40) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟರು.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಅವರು ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿನ ಮಿದುಳು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಲು ನ.22 ರಂದು ಬಸ್‌ನಲ್ಲಿ ಬಂದಿದ್ದರು. ‌

ಬಸ್ ಇಳಿದು ರಸ್ತೆ ದಾಟುವಾಗ ಕೋಲಾರದ ಕಡೆಯಿಂದ ಹೊಸಕೋಟೆ ಕಡೆ ಹೋಗುತ್ತಿದ್ದ ಟೆಂಪೋ ಡಿಕ್ಕಿ ಹೊಡೆದು ಅವರಿಗೆ ತೀವ್ರ ಪೆಟ್ಟಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.