
ಬೆಂಗಳೂರು: ವಿಶ್ವ ಮಾನವೀಯ ದಿನದ ಪ್ರಯುಕ್ತ ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಭಾಗವಾಗಿ ಬೈಕ್ ರ‍್ಯಾಲಿ ನಡೆಯಿತು.
ಸಮುದಾಯದ ಜವಾಬ್ದಾರಿ, ಅಪರಾಧ ತಡೆಗಟ್ಟುವಿಕೆ ಮತ್ತು ಸುರಕ್ಷಿತ ಚಾಲನೆಯನ್ನು ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ವಿದ್ಯಾರ್ಥಿಗಳು, ಬಿಯುಸಿ-ಇಂಡಿಯಾ ರೈಡರ್ಸ್ ಮತ್ತು ಬೆಂಗಳೂರು ನಗರ ಪೊಲೀಸರೊಂದಿಗೆ ಭಾಗವಹಿಸಿದ್ದರು.
ಇದೇ ಸಮಯದಲ್ಲಿ ‘ಅಖಿಲ ಭಾರತ ಮತ್ತು ನೇಪಾಳ ಅಂತರರಾಷ್ಟ್ರೀಯ ಜಾಗೃತಿ ರ‍್ಯಾಲಿ’ಗೆ ಚಾಲನೆ ನೀಡಲಾಯಿತು. ಮಾನವೀಯತೆಯನ್ನು ಉಣಿಸುವುದು ಮತ್ತು ಸುರಕ್ಷತಾ ಚಾಲನಾ ಸಂಸ್ಥತಿ ಬೆಳೆಸುವುದರ ಬಗ್ಗೆ ಸಂದೇಶಗಳನ್ನು ಹೊತ್ತು ಸಾಗಿತು. ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್ ಅಧ್ಯಕ್ಷ ಸುಜ್ಞಾನ್ ಮನು ನೇತೃತ್ವ ವಹಿಸಿದ್ದರು. 45 ದಿನ ಭಾರತದ ಹಲವು ರಾಜ್ಯಗಳು ಮತ್ತು ನೇಪಾಳಕ್ಕೆ ರ‍್ಯಾಲಿ ಸಾಗಿತು.
ಸಂಚಾರ ಅವಧಿಯಲ್ಲಿ ಪ್ರಮುಖ ನಗರಗಳಲ್ಲಿ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಲಾಯಿತು. ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂವಾದಗಳನ್ನು ಏರ್ಪಡಿಸಲಾಯಿತು.
ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಉಪ ಪೊಲೀಸ್ ಕಮಿಷನರ್ (ವೈಟ್‌ಫೀಲ್ಡ್) ಪರಶುರಾಮ್, ಸಹಾಯಕ ಪೊಲೀಸ್ ಕಮಿಷನರ್ (ವೈಟ್‌ಫೀಲ್ಡ್) ರೀನಾ ಸುವರ್ಣ ಮತ್ತು ಕೆ.ಆರ್.ಪುರಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಮೂರ್ತಿ ಪಾಲ್ಗೊಂಡಿದ್ದರು. ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್ ಅಧ್ಯಕ್ಷ ಸುಜ್ಞಾನ್ ಮನು, ಕಾರ್ಯದರ್ಶಿ ಅಪೂರ್ವ ಡಿ.ಆರ್., ಸಿಐಟಿ ಅಧ್ಯಕ್ಷ ಡಿ.ಕೆ. ಮೋಹನ್, ಸಿಇಒ ನಿತಿನ್ ಮೋಹನ್ ಕಾರ್ಯಕ್ರಮದ ಉದ್ದೇಶ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೀಮಾಂತ್ ಕುಮಾರ್ ಸಿಂಗ್ ಅವರಿಗೆ ಅತ್ಯುತ್ತಮ ನಾಯಕತ್ವ ಮತ್ತು ಸಮುದಾಯ ಕಲ್ಯಾಣಕ್ಕಾಗಿ ವಿಶೇಷ ಗೌರವ ನೀಡಲಾಯಿತು. ಸಿಐಟಿ ವಿದ್ಯಾಸಂಸ್ಥೆ, ಕ್ಯಾಪ್ಟನ್ ಬಿ.ಬಿ. ರಘುನಾಥ್, ಮಾಸ್ಟರ್ ಲಿಖಿತ್, ಶಿಶು ಮಂದಿರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.