ADVERTISEMENT

ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 20:28 IST
Last Updated 8 ನವೆಂಬರ್ 2022, 20:28 IST

ಬೆಂಗಳೂರು: ಹೆಚ್ಚಿನ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ ಪತಿ ಪರಶುರಾಮ ದೇಸಾಯಿ ಎಂಬಾತನಿಗೆ ಜೀವಾವಧಿ‌ ಶಿಕ್ಷೆ‌ ವಿಧಿಸಿ ನಗರದ 72ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

2015ರ ಫೆ. 2ರಂದು‌ ನಡೆದಿದ್ದ ಯಲ್ಲಮ್ಮ ಕೊಲೆ‌ ಪ್ರಕರಣದ‌ ವಿಚಾರಣೆಯನ್ನು ನ್ಯಾಯಾಧೀಶರಾದ ಕೆ.ಎಸ್.ಜ್ಯೋತಿಶ್ರೀ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದಿಸಿದ್ದರು.

‘ಯಾದಗಿರಿ‌ ಜಿಲ್ಲೆಯ ಪರಶುರಾಮ‌ ಹಾಗೂ ಯಲ್ಲಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪೀಣ್ಯ ಠಾಣೆ ವ್ಯಾಪ್ತಿಯ ನೆಲಗೆದರನಹಳ್ಳಿಯಲ್ಲಿ ದಂಪತಿ‌ ವಾಸವಿದ್ದರು. ಮದುವೆ ವೇಳೆ ವರದಕ್ಷಿಣೆ ಪಡೆದಿದ್ದ ಪರಶುರಾಮ, ಪುನಃ ₹ 3 ಲಕ್ಷ ನಗದು ಹಾಗೂ ಬೈಕ್ ವರದಕ್ಷಿಣೆ‌ ತರುವಂತೆ ಪತ್ನಿಯನ್ನು ಪೀಡಿಸಲಾರಂಭಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ವರದಕ್ಷಿಣೆ ತರಲು ಪತ್ನಿ ಯಲ್ಲಮ್ಮ ನಿರಾಕರಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪರಶುರಾಮ, ಚಾಕುವಿನಿಂದ ಇರಿದು ಕೊಂದಿದ್ದ. ಪ್ರಕರಣ ಸಂಬಂಧ ಪೊಲೀಸರು, ಪರಶುರಾಮ ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು’ ಎಂದು‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.