ADVERTISEMENT

ಐಎಎಸ್‌ ಅಧಿಕಾರಿಗೆ ವಂಚನೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 16:08 IST
Last Updated 23 ಏಪ್ರಿಲ್ 2025, 16:08 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಆನ್‌ಲೈನ್‌ನಲ್ಲಿ ಬಂದ ಜಾಹೀರಾತು ಗಮನಿಸಿ ಸೀರೆ ಬುಕ್ ಮಾಡಿದ್ದ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ.

ಪಲ್ಲವಿ ಅಕುರಾತಿ ವಂಚನೆಗೆ ಒಳಗಾದವರು. ‌ಪಲ್ಲವಿ ನೀಡಿರುವ ದೂರು ಆಧರಿಸಿ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ADVERTISEMENT

‘ತಮಿಳುನಾಡಿನ ಮದುರೈ ಕಾಟನ್ ಸೀರೆ ಮಾರಾಟದ ಬಗ್ಗೆ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೊವನ್ನು ಪಲ್ಲವಿ ವೀಕ್ಷಿಸಿದ್ದರು. ಬಳಿಕ ಸೀರೆಯೊಂದನ್ನು ಆಯ್ಕೆ ಮಾಡಿ, ಅದರ ಸ್ಕ್ರೀನ್ ಶಾಟ್ ಜೊತೆಗೆ ಆನ್​ಲೈನ್ ಮೂಲಕ ಮಾರ್ಚ್​​ 10ರಂದು ಗೂಗಲ್ ಪೇ ಮೂಲಕ ₹850 ಪಾವತಿಸಿದ್ದರು. ಪಲ್ಲವಿ ನೀಡಿದ್ದ ವಿಳಾಸಕ್ಕೆ ಮಾರಾಟಗಾರರು ಸೀರೆಯನ್ನು ಕಳುಹಿಸಿರಲಿಲ್ಲ. ಹಣವನ್ನೂ ವಾಪಸ್‌ ಮಾಡಿರಲಿಲ್ಲ. ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಇದೇ ಹಲವು ಮಹಿಳೆಯರಿಗೆ ವಂಚನೆ ಆಗಿರುವ ಮಾಹಿತಿ ಸಿಕ್ಕಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.