ADVERTISEMENT

ಇಗೋ ವಿಜ್ಞಾನ ಬರಹ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 18:58 IST
Last Updated 8 ಜನವರಿ 2020, 18:58 IST

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿಮುನ್ನೋಟ ಟ್ರಸ್ಟ್‌ ವತಿಯಿಂದ ‘ಇಗೋ ವಿಜ್ಞಾನ’ ವಿಶೇಷ ಬರಹ ಸ್ಪರ್ಧೆ ಏರ್ಪಡಿಸಿದೆ.

ವಿಜೇತರಿಗೆ ₹10 ಸಾವಿರ (ಪ್ರಥಮ) ಹಾಗೂ ₹5 ಸಾವಿರ (ದ್ವಿತೀಯ) ನಗದು ಬಹುಮಾನ ನೀಡಲಾಗುವುದು.

ವಿಷಯಗಳು: ಮೂಲ ವಿಜ್ಞಾನದ ಮುಂದಿನ ದಿನಗಳು, ಸಾರಿಗೆ ವ್ಯವಸ್ಥೆಗಳಲ್ಲಾಗುವ ಬದಲಾವಣೆಗಳು, ಅರಿವಿನ ಜಗತ್ತಿಗೆ ಗಣಿತದ ಕೊಡುಗೆಗಳು, ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳು, ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?, ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು, ಬಾನಂಗಳದ ಮುಂದಿನ ದಿನಗಳು, ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?.

ADVERTISEMENT

ಇವುಗಳಲ್ಲಿ ಒಂದು ವಿಷಯ ಕುರಿತು ಬರಹ ಒಂದು ಸಾವಿರ ಪದಮಿತಿಯಲ್ಲಿರಲಿ. ಆಯ್ದ ಬರಹಗಳನ್ನು arime.org ಪೋರ್ಟಲ್‌ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಬರಹಗಳನ್ನು prashant@munnota.comಗೆ ಫೆಬ್ರುವರಿ 15ರೊಳಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ಸಂಪರ್ಕ:080 26603000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.