ADVERTISEMENT

ಐಐಎಂ: 411 ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:05 IST
Last Updated 15 ಫೆಬ್ರುವರಿ 2019, 19:05 IST

ಬೆಂಗಳೂರು: ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ(ಐಐಎಂಬಿ) 411 ವಿದ್ಯಾರ್ಥಿಗಳು ಉದ್ಯೋಗಾವಕಾಶದ ಆಫರ್‌ಗಳನ್ನು ಪಡೆದಿದ್ದಾರೆ.

ಎರಡು ದಿನಗಳ ಅವಧಿಯಲ್ಲಿ ಅಂತಿಮ ಪ್ಲೇಸ್‌ಮೆಂಟ್‌ನ ಸಂದರ್ಶನ ಪ್ರಕ್ರಿಯೆ ನಡೆಯಿತು. ಇದರಲ್ಲಿ ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೂ ವಿವಿಧ ಕಂಪನಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ಉದ್ಯೋಗದ ಆಫರ್‌ಗಳು ಸಿಕ್ಕಿವೆ.

ಆಕ್ಸೆಂಚರ್‌, ಡೆಲಾಯ್ಟಿ, ಬೇನ್‌ ಅಂಡ್‌ ಕಂಪನಿ, ಇನ್ಫೋಸಿಸ್‌, ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌, ಮೆಕ್‌ಕಿನ್ಸೆ, ನೊಮುರಾ ರೀಸರ್ಚ್‌ ಇನ್ಸ್‌ಟಿಟ್ಯೂಟ್‌, ಕೆಪಿಎಂಜಿ ಸೇರಿ
ದಂತೆ ಹಲವು ಕಂಪನಿಗಳು ಭಾಗವಹಿಸಿದ್ದವು. ಹಿಂದಿನ ವರ್ಷಗಳಿಗಿಂತ ಈ ವರ್ಷ ಉತ್ತಮ ಆಫರ್‌ಗಳು
ವಿದ್ಯಾರ್ಥಿಗಳಿಗೆ ಸಿಕ್ಕಿವೆ ಎಂದು ಉದ್ಯೋಗ ಅಭಿವೃದ್ಧಿ ಸೇವೆಗಳ ವಿಭಾಗದ ಅಧ್ಯಕ್ಷ ಗಣೇಶ್‌ ಎನ್‌ ಪ್ರಭು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.