ADVERTISEMENT

ಐಎಂಎ; ಪಾಲಿಕೆ ಸದಸ್ಯೆಯ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 18:56 IST
Last Updated 30 ಜುಲೈ 2019, 18:56 IST
ಇಷ್ತಿಯಾಕ್
ಇಷ್ತಿಯಾಕ್   

ಬೆಂಗಳೂರು: ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಕಾರ್ಪೊರೇಟರ್ ಫರೀದಾ ಅವರ ಪತಿ ಇಷ್ತಿಯಾಕ್ ಅಹ್ಮದ್‌ನನ್ನು (50) ಎಸ್‌ಐಟಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಯಾದ ಕಂಪನಿಯ ಮಾಲೀಕ ಮನ್ಸೂರ್ ಖಾನ್ ಅವರಿಂದ ಇಷ್ತಿಯಾಕ್ ಅಹ್ಮದ್‌ ₹ 2 ಕೋಟಿ ಪಡೆದಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಪುರಾವೆಗಳನ್ನು ಕಲೆಹಾಕಿ ಆತನನ್ನು ಬಂಧಿಸಲಾಯಿತು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘1993ರಿಂದಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಇಷ್ತಿಯಾಕ್, ಶಿವಾಜಿನಗರ ಠಾಣೆಯ ರೌಡಿಶೀಟರ್. ಆತನ ವಿರುದ್ಧ ಶಿವಾಜಿ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ 48 ಪ್ರಕರಣ ದಾಖಲಾಗಿವೆ’ ಎಂದರು.

ADVERTISEMENT

‘ಆರೋಪಿಗೂ ಮನ್ಸೂರ್ ಖಾನ್‌ಗೂ ಹಲವು ವರ್ಷಗಳಿಂದ ಪರಿಚ ಯವಿತ್ತು. ಕಂಪನಿ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಹೇಳಿ ಆರೋಪಿ ಹಣ ಪಡೆದಿದ್ದ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಕೋರಲಿದ್ದೇವೆ. ಕಸ್ಟಡಿಗೆ ಸಿಕ್ಕ ಬಳಿಕವೇ ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.