ADVERTISEMENT

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ: ತ್ರಿವರ್ಣಗಳಲ್ಲಿ ಬೆಳಗಿದ ನಗರ

ಪ್ರಯುಕ್ತ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 21:29 IST
Last Updated 14 ಆಗಸ್ಟ್ 2022, 21:29 IST
ರಿಚ್ಮಂಡ್ ವೃತ್ತದಲ್ಲಿ ಬಟ್ಟೆ ಹಾಗೂ ಬಲೂನಿನಿಂದ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿರುವುದು
ರಿಚ್ಮಂಡ್ ವೃತ್ತದಲ್ಲಿ ಬಟ್ಟೆ ಹಾಗೂ ಬಲೂನಿನಿಂದ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿರುವುದು   

ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ನಗರದಲ್ಲಿನ ಮಳಿಗೆಗಳು, ಮನೆಗಳು ಸೇರಿ ಎಲ್ಲೆಡೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಸರ್ಕಾರಿ ಕಚೇರಿಗಳು ಸೇರಿ ಬಹುಮಹಡಿ ಕಟ್ಟಡಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.

ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಸಮಾರಂಭವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲು ಬಿಬಿ ಎಂಪಿ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಸಮಾರಂಭಕ್ಕೆ ಎರಡು ವರ್ಷದ ಬಳಿಕ ಸಾರ್ವಜನಿಕರಿಗೆ ಪ್ರವೇಶಾವಕಾಶ ನೀಡಲಾಗಿದೆ.

ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾ ರೋಹಣ ನೆರವೇರಿಸಲಿದ್ದಾರೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಘ–ಸಂಸ್ಥೆಗಳೂ ಸ್ವಾತಂತ್ರ್ಯೋತ್ಸವ ಸಮಾರಂಭ ಹಮ್ಮಿಕೊಂಡಿವೆ.

ADVERTISEMENT

‘ಹರ್ ಘರ್ ತಿರಂಗಾ’ ಅಭಿಯಾನ ದಡಿ ಶನಿವಾರ ಧ್ವಜ ಹಾರಿಸದಿದ್ದವರು ಭಾನುವಾರ ಧ್ವಜಗಳನ್ನು ಖರೀದಿಸಿ, ಮನೆಗಳಲ್ಲಿ ಧ್ವಜ ಹಾರಿಸಿ ದರು. ವಿಧಾನಸೌಧದ ಮುಂಭಾಗ ಸೇರಿ ನಗರದ ಹಲವು ವೃತ್ತಗಳಲ್ಲಿ ವಿವಿಧ ಗಾತ್ರಗಳ ಧ್ವಜಗಳ ಮಾರಾಟ ಭರದಿಂದ ನಡೆಯಿತು. ಬೈಕ್ ಸವಾರರು, ಆಟೊ ಚಾಲಕರು ವಾಹನಕ್ಕೆ ಧ್ವಜ ಸಿಕ್ಕಿಸಿಕೊಂಡು ಸಂಚರಿಸಿದರು. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನರು ಧ್ವಜ ಹಿಡಿದು ಸಂಭ್ರಮಿಸಿದರು.

ರಿಚ್ಮಂಡ್, ಸಜ್ಜನ್ ರಾವ್,ರಾಜರಾಮ್ ಮೋಹನ್ ರಾಯ್ ಸೇರಿ ವಿವಿಧ ವೃತ್ತಗಳನ್ನು ಕೇಸರಿ, ಬಿಳಿ, ಹಸಿರು ಬಟ್ಟೆ ಹಾಗೂ ಬಲೂನುಗಳಿಂದ ಅಲಂಕರಿಸಲಾಗಿದೆ. ಬೃಹದಾಕಾರದ ಧ್ವಜಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನೂ ಅಳವಡಿಸಲಾಗಿದೆ. ನಗರದ ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಉಚಿತವಾಗಿ ಧ್ವಜಗಳನ್ನು ವಿತರಿಸಲಾಯಿತು.

‘ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ಮಲ್ಲೇಶ್ವರದ ಸರ್ಕಾರಿ ಕಾಲೇಜು ಮೈದಾನದಲ್ಲಿಭಾನುವಾರ ರಾತ್ರಿಸ್ಥಳೀಯ ಶಾಸಕ ಹಾಗೂ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು. ತೆಲುಗು ಗಾಯಕಿ ಮಂಗ್ಲಿ (ಸತ್ಯವತಿ) ಅವರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ವಿವಿಧ ಸಂಘ–ಸಂಸ್ಥೆಗಳು ಸೋಮ ವಾರ ವಾಕಥಾನ್, ಸೈಕಲ್ ಜಾಥಾ, ಬೈಕ್‌ ರ್‍ಯಾಲಿಗಳನ್ನು ಹಮ್ಮಿಕೊಂಡಿದ್ದು, ಭಾನುವಾರ ಅಂತಿಮ ಹಂತದ ಸಿದ್ಧತೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.