ADVERTISEMENT

ಹೋರಿಗಳ ಕತ್ತು ಕೊಯ್ದ ಪ್ರಕರಣ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:24 IST
Last Updated 19 ಆಗಸ್ಟ್ 2025, 2:24 IST
ಮೊಹಮ್ಮದ್‌ ಶುಯೇಬ್‌
ಮೊಹಮ್ಮದ್‌ ಶುಯೇಬ್‌   

ನೆಲಮಂಗಲ: ಅರಳಸಂದ್ರ ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ಎರಡು ಹೋರಿಗಳ ಕತ್ತು ಕೊಯ್ದು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಂಎಸ್ ಪಾಳ್ಯದ ನಿವಾಸಿ ಇಮ್ರಾನ್ (30), ಮೊಹಮ್ಮದ್‌ ಸಾಬ್ ಪಾಳ್ಯದ ನಿವಾಸಿ ಸೈಯದ್‌ ನವಾಜ್ (35), ಶ್ರೀನಿಧಿ ಬಡಾವಣೆಯ ನಿವಾಸಿ ವೆಂಕಟೇಶ್ ಅಲಿಯಾಸ್ ಮೊಹಮ್ಮದ್‌ ಶುಯೇಬ್‌ (20) ಬಂಧಿತರು.

ಆಗಸ್ಟ್‌ 10ರಂದು ತಾಲ್ಲೂಕಿನ ಅರಳಸಂದ್ರ ಗ್ರಾಮದ ಸೇತುವೆ ಮೇಲೆ ಎರಡು ಹಳ್ಳಿಕಾರ್ ತಳಿಯ ಹೋರಿಗಳ ಕತ್ತು ಕೊಯ್ದು ಎಸೆಯಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ADVERTISEMENT

ಆಗಸ್ಟ್ 10ರ ಮಧ್ಯರಾತ್ರಿ ಟೆಂಪೊ ಮೂಲಕ ಬೆಂಗಳೂರಿನಿಂದ ಕೇರಳಕ್ಕೆ ದನಗಳನ್ನು ಆರೋಪಿಗಳು ಸಾಗಣೆ ಮಾಡುತ್ತಿದ್ದರು. ಮಾರ್ಗ ಮಧ್ಯದಲ್ಲಿ ಒಂದು ಹೋರಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತ್ತು. ಮತ್ತೊಂದು ಹೋರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಅವುಗಳ ಕತ್ತು ಕೊಯ್ದು ಅಲ್ಲಿಯೇ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ವಾಹನ ಚಲಿಸಿದ್ದ ಮಾರ್ಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಟೆಂಪೊ ನಂಬರ್ ಅನ್ನು ಪತ್ತೆ ಮಾಡಲಾಗಿತ್ತು. ಅದನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.

ಸೈಯದ್‌ ನವಾಜ್
ಇಮ್ರಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.