ADVERTISEMENT

ಪ್ಯಾರಿಸ್‌ನಲ್ಲಿ ‘ಇಂದ್ರಿಯ’ ಆಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 19:37 IST
Last Updated 30 ಜನವರಿ 2026, 19:37 IST
   

ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹದ ಆಭರಣ ಬ್ರ್ಯಾಂಡ್‌ ಆಗಿರುವ ‘ಇಂದ್ರಿಯ’ ತನ್ನ ಸಂಗ್ರಹ ಗಳನ್ನು ಇದೇ ಮೊದಲ ಬಾರಿಗೆ ‘ಪ್ಯಾರಿಸ್‌ ಕುಚೂರ್‌ ವೀಕ್‌’ನಲ್ಲಿ ಪ್ರದರ್ಶಿಸಿದೆ. ಇದಕ್ಕೆ ಖ್ಯಾತ ವಿನ್ಯಾಸಕಾರ ಗೌರವ್ ಗುಪ್ತ ಅವರು ಅಧಿಕೃತ ಆಭರಣ ಪಾಲುದಾರ ಆಗಿದ್ದರು.

ಈ ಮೂಲಕ ‘ಇಂದ್ರಿಯ’ ಬ್ರ್ಯಾಂಡ್‌ ಭಾರತದ ಆಭರಣಗಳ ಕಲಾತ್ಮಕತೆಯನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ವೇದಿಕೆಗೆ ಒಯ್ದಿದೆ ಎಂದು ಪ್ರಕಟಣೆ ಹೇಳಿದೆ.

‘ಇಂದ್ರಿಯ’ ಬ್ರ್ಯಾಂಡ್‌ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಶಾಂತಿಸ್ವರೂಪ್ ಪಂಡಾ ಅವರು, ‘ಈ ಬ್ರ್ಯಾಂಡ್‌ ಭಾರತದ ಸೂಕ್ಷ್ಮ ಕಲೆ, ಕುಸುರಿಯನ್ನು ತನ್ನ ವಿನ್ಯಾಸದಲ್ಲಿ ಒಳಗೊಂಡಿದೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.