ADVERTISEMENT

ದುಬೈನಿಂದಲೂ ಹೂಡಿಕೆ

ದೂರು ನೀಡುವ ಬದಲು ವಕಾಲತ್ತು ವಹಿಸಿದ್ದ ಹೂಡಿಕೆದಾರರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 20:00 IST
Last Updated 12 ಜೂನ್ 2019, 20:00 IST
   

ಬೆಂಗಳೂರು: ‘ಐಎಂಎ’ ಕಂಪನಿಗೆ ದುಬೈನಿಂದಲೂ ಜನ ಹಣ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಕಂದಾಯ ಇಲಾಖೆ ಉಪವಿಭಾಗಾಧಿಕಾ
ರಿಗೆ ದುಬೈನಿಂದ ಕರೆ ಬಂದಿದ್ದವು.

ಅಂಬಿಡೆಂಟ್‌ ವಂಚನೆ ಪ್ರಕರಣ ಬಯಲಾದಾಗ ಇದೇ ರೀತಿ ಜನರಿಂದ ಹೂಡಿಕೆ ಇದ್ದ ಕಂಪನಿಗಳ ಕಾರ್ಯವೈಖರಿ ಬಗ್ಗೆನಿಗಾ ವಹಿಸಲು ರಾಜ್ಯಕ್ಕೆ ಆರ್‌ಬಿಐ ಪತ್ರ ಬರೆದಿತ್ತು.

ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ನೇತೃತ್ವದಲ್ಲಿ ದೂರು ಪ್ರಾಧಿಕಾರವನ್ನು ರಚನೆಯಾಗಿತ್ತು.ಜನ ಎಷ್ಟು ಹೂಡಿಕೆ ಮಾಡಿದ್ದಾರೆ? ಆ ಕಂಪನಿಗಳ ಆಸ್ತಿ ಮೌಲ್ಯ ಎಷ್ಟಿದೆ? ಎಂಬುದನ್ನು ಪತ್ತೆ ಹಚ್ಚುವ ಕೆಲಸಪ್ರಾಧಿಕಾರ ಆರಂಭಿಸಿತ್ತು. ದೂರು
ಕೊಡಿ ಎಂದು ಹೂಡಿಕೆ ಮಾಡಿದವರಿಗೆ ವಾರ್ತಾ ಇಲಾಖೆ ಮೂಲಕಕನ್ನಡ, ಇಂಗ್ಲಿಷ್ ಪತ್ರಿಕೆಗಳಿಗೆ ಪ್ರಕಟಣೆ ಕೊಡಲಾಯಿತು. ಆದರೆ ಉರ್ದು ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ.

ADVERTISEMENT

ದುಬೈನಿಂದ ಕರೆ ಮಾಡಿ ‘ಐಎಂಎ ಕಂಪನಿಯಲ್ಲಿ ನಾವೂ ಹಣ ಹೂಡಿದ್ದೇವೆ. ಪ್ರತಿ ತಿಂಗಳು ಖಾತೆಗೆ ಹಣ ಜಮೆ ಆಗುತ್ತಿದೆ. ಸುಮ್ಮನೆ ಏಕೆ ತೊಂದರೆ ಕೊಡುತ್ತಿದ್ದೀರಿ’ ಎಂದಿದ್ದರು. ‘ದೂರು ಬಾರದ ಕಾರಣ ಆಗ ತನಿಖೆ ಮುಂದುವರಿಯಲಿಲ್ಲ. ತನಿಖೆ ನಡೆಸಲು ನಮಗೆ ಈಗ ಅಧಿಕಾರ ಇಲ್ಲ’ ಎಂದು ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.