
ಬೆಂಗಳೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಕೆನರಾ ರೊಬೆಕೊ’ ಮ್ಯೂಚುವಲ್ ಫಂಡ್ಸ್ ಸಹಯೋಗದೊಂದಿಗೆ ಜನವರಿ 12 ರಂದು ಸಂಜೆ 4 ಗಂಟೆಗೆ ಹಣಕಾಸು ತಜ್ಞರಿಂದ ‘ಸ್ಮಾರ್ಟ್ ಟುಮಾರೊ– ಹೂಡಿಕೆದಾರರಿಗೆ ಜಾಗೃತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ದಿ ಪ್ರಿಂಟರ್ಸ್ ಮೈಸೂರು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ, ಬಂಡವಾಳ ಮಾರುಕಟ್ಟೆಯಲ್ಲಿ ಅಪಾಯಗಳ ನಿರ್ವಹಣೆ, ಮಾರುಕಟ್ಟೆ ಒಳಸುಳಿವು ಮತ್ತು ಹಣಕಾಸು ಯೋಜನೆ, ಕಾಲಕಾಲಕ್ಕೆ ಶಿಸ್ತುಬದ್ದ ಹೂಡಿಕೆಗಳ ಬಗ್ಗೆ ಆರ್ಥಿಕ ಪರಿಣತರು ಮಾಹಿತಿ ನೀಡುವರು.
ಇತ್ತೀಚಿನ ಸುಲಭ ಹೂಡಿಕೆ ವಿಧಾನ ಮತ್ತು ಹಿಂಪಡೆಯುವಿಕೆ ಆಯ್ಕೆಗಳ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಬಹುದು. 60 ರಿಂದ 90 ನಿಮಿಷದ ಅವಧಿಯ ಉಪನ್ಯಾಸ ಕಾರ್ಯಕ್ರಮವನ್ನು ‘ಕೆನರಾ ರೊಬೆಕೊ’ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ನಿರ್ವಹಿಸುವರು.
ಇದು ರಾಜ್ಯದಲ್ಲಿ ನಡೆಯುತ್ತಿರುವ 4ನೇ ಆವೃತ್ತಿಯ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ. ಮಾಹಿತಿಗೆ 7338018541 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.