ಪ್ರಾತಿನಿಧಿಕ ಪತ್ರ
ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನದಲ್ಲಿ ಕೆ. ಮೋಹನ್ ದೇವ್ ಆಳ್ವ–ಎಂ.ಕೆ. ಶೈಲಜಾ ಆಳ್ವ ಸ್ಥಾಪಿಸಿರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ದತ್ತಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ದತ್ತಿ, ರೆವರೆಂಡ್ ಚೆನ್ನಪ್ಪ ದಾನಿ ಎಲ್ಲಪ್ಪ ಉತ್ತಂಗಿ ದತ್ತಿ, ಕೃಷ್ಣಮೂರ್ತಿ ಪುರಾಣಿಕ ದತ್ತಿಗಳ ಆಶ್ರಯದಲ್ಲಿ 10ರಿಂದ 16 ವರ್ಷದೊಳಗಿನವವರಿಗೆ ಅಕ್ಟೋಬರ್ 12ರಂದು ಬೆಳಿಗ್ಗೆ 10ಕ್ಕೆ ಕವನ ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ.
ಗೋವಿಂದ ಪೈ, ದ.ರಾ.ಬೇಂದ್ರೆ, ಕೃಷ್ಣಮೂರ್ತಿ ಪುರಾಣಿಕರ ಯಾವುದಾದರೂ ಒಂದು ಕವನವನ್ನು ಸ್ಪರ್ಧಿಗಳು ವಾಚಿಸಬೇಕು. ಪ್ರಥಮ ಬಹುಮಾನ ₹ 4,000, ದ್ವಿತೀಯ ಬಹುಮಾನ ₹ 3,000, ತೃತೀಯ ಬಹುಮಾನ ₹ 2,000 ನಗದು ಮತ್ತು ಪ್ರಮಾಣ ಪತ್ರ ಇರಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಅಕ್ಟೋಬರ್ 6ರ ಒಳಗೆ ಬಿಎಂಶ್ರೀ ಪ್ರತಿಷ್ಠಾನ ಕಚೇರಿ, 3ನೇ ಮುಖ್ಯರಸ್ತೆ, ಬಿಎಂಶ್ರೀ ಪ್ರತಿಷ್ಠಾನ ರಸ್ತೆ, ನರಸಿಂಹರಾಜ ಕಾಲೊನಿ, ಬೆಂಗಳೂರು–560004 ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ– 9972812127 ಸಂಪರ್ಕಿಸಬಹುದು ಎಂದು ಬಿಎಂಶ್ರೀ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.