ADVERTISEMENT

ಅಭಿವೃದ್ಧಿ ಆಯುಕ್ತರಾಗಿ ಐ.ಎಸ್‌.ಎನ್. ಪ್ರಸಾದ್

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:38 IST
Last Updated 29 ಮೇ 2022, 19:38 IST

ಬೆಂಗಳೂರು: 11 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಭಾನುವಾರ ರಾತ್ರಿ ಆದೇಶ ಹೊರಡಿಸಿದ್ದು, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್ ಅವರನ್ನು ಅಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಜನೀಶ್ ಗೋಯಲ್‌ ಅವರನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ವಂದಿತಾ ಶರ್ಮ ಈ ಹುದ್ದೆಯಲ್ಲಿದ್ದರು.

ಇತರ ವರ್ಗಾವಣೆಗಳ ವಿವರ: ಆರ್‌. ಉಮಾಶಂಕರ್‌– ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಶ್ಮಿ ವಿ. ಮಹೇಶ್‌– ಉನ್ನತ ಶಿಕ್ಷಣ ಇಲಾಖೆ ‍ಪ್ರಧಾನ ಕಾರ್ಯದರ್ಶಿ, ಪಂಕಜ್‌ ಕುಮಾರ್‌ ಪಾಂಡೆ– ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ), ಡಾ. ರಾಮ್‌ ಪ್ರಸಾದ್‌ ಮನೋಹರ್‌ ವಿ. – ವಿಶೇಷ ಆಯುಕ್ತರು ಬಿಬಿಎಂಪಿ (ಎಸ್ಟೇಟ್ಸ್‌ ವಿಭಾಗ), ವಿನೋದ್‌ ಪ್ರಿಯಾ ಆರ್‌.– ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ.

ADVERTISEMENT

ರಮೇಶ್‌ ಡಿ.ಎಸ್‌.– ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಶರತ್‌ ಬಿ.– ಆಯುಕ್ತರು, ಕೃಷಿ ಇಲಾಖೆ, ಸತ್ಯಭಾಮಾ ಸಿ.–ನಿರ್ದೇಶಕರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಭಾಗ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸೋಮಶೇಖರ್‌ ಎಸ್‌.ಜೆ.– ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.