‘ಬಯಲು ಬಳಗ’ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ‘ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ’ ಕವನ ಸಂಕಲನ, ‘ಓದಿನ ಒಕ್ಕಲು’ ವಿಮರ್ಶಾ ಲೇಖನಗಳ ಸಂಕಲನ ಬಿಡುಗಡೆ ಮಾಡಿದರು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸನಾತನ ಧರ್ಮದ ಬಗ್ಗೆ ಚರ್ಚೆಯಾಗುತ್ತಿದೆ. ಸನಾತನ ಧರ್ಮದ ಅವಾಂತರಗಳು ವ್ಯಾಪಕ ಮತ್ತು ನಿರಂತರವಾಗಿದೆ. ಹಾಗಾಗಿ ಇಂದು ದ್ವಿಜ ಧರ್ಮ ಮತ್ತು ಶೂದ್ರ ಧರ್ಮ ಎಂದು ಎರಡು ಪ್ರತ್ಯೇಕ ಧರ್ಮಗಳನ್ನು ರೂಪಿಸುವುದು ಒಳಿತು’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ರಂಗನಾಥ ಕಂಟನಕುಂಟೆ ಅವರ ‘ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ’ ಕವನ ಸಂಕಲನ, ‘ಓದಿನ ಒಕ್ಕಲು’ ವಿಮರ್ಶಾ ಲೇಖನಗಳ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಇಂದು ಧರ್ಮದ ಚರ್ಚೆಗಳು ದಿಕ್ಕು ತಪ್ಪಿವೆ. ಒಮ್ಮೊಮ್ಮೆ ಏನು ಮಾತನಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.
ಲೇಖಕ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕರಾದ ಗಂಗರಾಜು ಜಿ. ಮತ್ತು ದೇವರಾಜು ಡಿ.ಆರ್. ಕೃತಿಗಳನ್ನು ಪರಿಚಯಿಸಿದರು. ಲೇಖಕ ರಂಗನಾಥ ಕಂಟನಕುಂಟೆ, ಪ್ರಾಧ್ಯಾಪಕ ರವಿಕುಮಾರ್ ಬಾಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.