ADVERTISEMENT

ಏಕಾಏಕಿ ಪರೀಕ್ಷೆಗೆ ಐಟಿಐ ವಿದ್ಯಾರ್ಥಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 21:07 IST
Last Updated 16 ಫೆಬ್ರುವರಿ 2021, 21:07 IST
ಐಟಿಐ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕ ಕೃಷ್ಣಪ್ಪ ಹಾಗೂ ಪರೀಕ್ಷಾ ನಿಯಂತ್ರಕ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಐಟಿಐ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕ ಕೃಷ್ಣಪ್ಪ ಹಾಗೂ ಪರೀಕ್ಷಾ ನಿಯಂತ್ರಕ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.   

ಬೆಂಗಳೂರು: ’ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯುಐಟಿಐ ಪ್ರಥಮ ವರ್ಷದ ಪರೀಕ್ಷೆಯನ್ನು ದಿಢೀರ್‌ ಘೋಷಿಸಿದೆ. ಕೊರೊನಾ ಕಾರಣದಿಂದ ಪರೀಕ್ಷೆ ರದ್ದಗೊಳಿಸಬೇಕು ಹಾಗೂ ದ್ವಿತೀಯ ವರ್ಷಕ್ಕೆ ತೇರ್ಗಡೆ ಮಾಡಬೇಕು‘ ಎಂದು ಐಟಿಐ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇಲಾಖೆಯ ಕ್ರಮ ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಗಳು ಜಂಟಿಯಾಗಿ ಇಲಾಖೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದವು.

ಪರೀಕ್ಷೆ ರದ್ದು ಮಾಡುವಂತೆಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ADVERTISEMENT

‘ಕೊರೊನಾ ಕಾರಣದಿಂದ 2019–20ನೇ ಸಾಲಿನ ಐಟಿಐ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಲಾಗಿತ್ತು. ಆದರೆ, ಈಗ ಏಕಾಏಕಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ, ಒಂದೇ ದಿನದಲ್ಲಿ ಪರೀಕ್ಷೆ ಶುಲ್ಕ ತುಂಬಲು ಕಾಲಾವಕಾಶ ನೀಡಿರುವುದು ವಿದ್ಯಾರ್ಥಿ ವಿರೋಧಿ ಕ್ರಮ’ ಎಂದು ಐಟಿಐ ವಿದ್ಯಾರ್ಥಿ ಮನು ದೂರಿದರು.

‘ಕೊರೊನಾ ಕಾರಣದಿಂದ ಹಿಂದಿನ ಆದೇಶದಂತೆ ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ತೇರ್ಗಡೆ ಮಾಡಬೇಕು. ಏಕಾಏಕಿ ಪರೀಕ್ಷಾ ಶುಲ್ಕ ಕಟ್ಟಲು ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು’ ಎಂದುಎಐಡಿವೈಒ ಕಾರ್ಯದರ್ಶಿ ಜಯಣ್ಣಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.