ADVERTISEMENT

‘ಜೈನ ಪುರೋಹಿತರಿಗೂ ಪರಿಹಾರ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 21:15 IST
Last Updated 17 ಜೂನ್ 2021, 21:15 IST

ಬೆಂಗಳೂರು: ಜೈನ ಬಸದಿಗಳಲ್ಲಿ ಪೂಜೆ ಮಾಡುವ ಪುರೋಹಿತ ವರ್ಗವೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿದೆ. ಈ ಸಮುದಾಯಕ್ಕೆ ತಲಾ ₹5 ಸಾವಿರ ಪರಿಹಾರ ಘೋಷಿಸಬೇಕು ಎಂದು ಕರ್ನಾಟಕ ಜೈನ ಸಂಘ ಮನವಿ ಮಾಡಿದೆ.

‘ರಾಜ್ಯದಲ್ಲಿ ಸುಮಾರು 1,130 ಜಿನ ಮಂದಿರಗಳಿವೆ. ಇವುಗಳಲ್ಲಿ ಸುಮಾರು 2,000 ಪುರೋಹಿತರು ಪೂಜೆ ಸಲ್ಲಿಸುತ್ತಿದ್ದಾರೆ. ಸಮಾಜದ ವತಿಯಿಂದ ಕೊಡುವ ಅತ್ಯಲ್ಪ ವೇತನವೇ ಅವರಿಗೆ ಆಧಾರವಾಗಿದೆ. ಆದರೆ, ಲಾಕ್‌ಡೌನ್‌ನಿಂದ ಈ ಹಣವೂ ಇಲ್ಲದೆ ಅವರು ಸಂಕಷ್ಟಕ್ಕೆ ಈಡಾಗಿದ್ದಾರೆ’ ಎಂದು ಕರ್ನಾಟಕ ಜೈನ್‌ ಅಸೋಸಿಯೇಷನ್‌ನ ಅಧ್ಯಕ್ಷ ಬಿ. ಪ್ರಸನ್ನಯ್ಯ ಹೇಳಿದ್ದಾರೆ.

‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮಸೀದಿಗಳ ಮೌಲ್ವಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಬಡವರಿಗೆ ಪರಿಹಾರ ಘೋಷಿಸಿದಂತೆ, ಜೈನ ಪುರೋಹಿತರಿಗೂ ಪರಿಹಾರ ನೀಡಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.