ADVERTISEMENT

ಜೆಇಇ: ಚೈತನ್ಯ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:45 IST
Last Updated 15 ಸೆಪ್ಟೆಂಬರ್ 2021, 19:45 IST
ಬಿ.ಎಸ್‌. ನಿರಂಜನ್‌
ಬಿ.ಎಸ್‌. ನಿರಂಜನ್‌   

ಬೆಂಗಳೂರು: ನಗರದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಜೆಇಇ (ಮೇನ್‌) ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್‌ ಸೇರಿದಂತೆ ಹಲವು ರ‍್ಯಾಕ್‌ಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಸುಹೇಲ್‌ ಶಿವರಾಮ್‌ ಅಖಿಲ ಭಾರತ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.

ಸಂಕೇತ್‌ ಸಿಂಗ್‌ 90ನೇ ರ‍್ಯಾಂಕ್‌, ಬಿ. ನಿರಂಜನ ರೆಡ್ಡಿ 153 ಹಾಗೂ ಬಿ. ಈಶ್ವರ್‌ 164ನೇ ರ‍್ಯಾಂಕ್‌ ಗಳಿಸಿದ್ದಾರೆ. ಕಾರ್ತಿಕ್‌ ಅಗರ್ವಾಲ್‌ 370ನೇ, ಆದಿತ್ಯ ಪ್ರಭಾಷ್‌ 909ನೇ ರ‍್ಯಾಂಕ್‌ ಪಡೆದಿದ್ದು, 1,000ದ ಒಳಗಡೆ 20 ರ‍್ಯಾಂಕ್‌ಗಳು ಸಂಸ್ಥೆಗೆ ದೊರಕಿವೆ ಎಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಪ್ರಕಟಣೆ ತಿಳಿಸಿದೆ.

‘ಕೋವಿಡ್‌ ಸಂದರ್ಭದಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಓದಿನ ಕಡೆಗೆ ಆದ್ಯತೆ ನೀಡಿದ್ದರು. ಪೋಷಕರೂ ಅವರಿಗೆ ಬೆಂಬಲವಾಗಿದ್ದರು. ವಿದ್ಯಾರ್ಥಿಗಳು ಮತ್ತು ಪೋಷಕರ ಶ್ರಮವೇ ಈ ಸಾಧನೆಗೆ ಕಾರಣ’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್‌. ರಾವ್‌ ಹಾಗೂ ಶೈಕ್ಷಣಿಕ ನಿರ್ದೇಶಕಿ ಸುಷ್ಮಾ ಬೋಪಣ್ಣ ಹೇಳಿದ್ದಾರೆ.‌

ADVERTISEMENT

ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್‌ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಅನಿರುದ್ಧ್‌ ಬಿ.ಎಸ್‌. ಜೆಇಇ (ಮೇನ್‌) ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 38ನೇ ರ‍್ಯಾಂಕ್‌ನೊಂದಿಗೆ ಸಾಧನೆ ಮಾಡಿದ್ದಾರೆ.

ದೀಕ್ಷಾ ತರಬೇತಿ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ ಪಡೆದಿದ್ದಾರೆ. ಪಿ.ಕೆ. ಅರ್ಚಿತ್‌ 127ನೇ ರ‍್ಯಾಂಕ್‌ ಗಳಿಸಿದ್ದು, 127ರಿಂದ 4907ರವರೆಗೆ 15 ರ‍್ಯಾಂಕ್‌ಗಳು ಸಂಸ್ಥೆಗೆ ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.