ADVERTISEMENT

ಜೆಇಇ: ವಿದ್ಯಾಜ್ಯೋತಿ ಕಾಲೇಜು ಪ್ರಥಮ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:57 IST
Last Updated 22 ಜನವರಿ 2020, 21:57 IST

ಬೆಂಗಳೂರು:ಐಐಟಿ ಮತ್ತು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) ಕೋಲಾರದ ವಿದ್ಯಾಜ್ಯೋತಿ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

ಕೋಲಾರದ ಬಸವನತ್ತ ಗ್ರಾಮದಲ್ಲಿರುವ ವಿದ್ಯಾಜ್ಯೋತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 325 ವಿದ್ಯಾರ್ಥಿಗಳು
ಅಂತಿಮ ಪರೀಕ್ಷೆಯಲ್ಲಿ ಬರೆದಿದ್ದರು. ಅದರಲ್ಲಿ ಫನೀಶ್ ಎಂಬ ವಿದ್ಯಾರ್ಥಿ ಶೇ 98.6ರಷ್ಟು ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ಸುಶಾಮ್.ಪಿ.ಎಸ್ ಹಾಗೂರಕ್ಷಿತ್ ಜೋಸೆಫ್ ಮನಾಲೂರ್ (ಶೇ 96), ಎಂ.ಎಸ್.ವಿದ್ಯಾಶ್ರೀ (96),ಎನ್.ಮಹೇಶ್‌ ಹಾಗೂ ಕೆ.ಎಂ.ಮಹೇಶ್‌ (95), ಎಂ.ವಿ.ವಿಘ್ನೇಶ್ (94), ಡಿ.ಎಸ್.ವೈಶಾಲಿ, ಎಲ್.ತುಳಸಿ ಹಾಗೂಪ್ರಣವ್ ದೀಪಕ್ (93),ಎಸ್.ವಿನಯ್ ಕುಮಾರ್,ಮೊಹಮದ್ ಮನ್ಸೂರ್ ಹಾಗೂಮಲ್ಲಿಕ್ ಖಾನ್ (92),ಎನ್.ವಿ.ನವೀನ್ ಕುಮಾರ್ (91), ಜಿ.ಕೃತಿಕಾ, ಜಿ.ಹರ್ಷಿತಾ ಹಾಗೂಕೆ.ಎಸ್.ಭಾವನಾ (91) ಹಾಗೂ ಎನ್.ತೃಪ್ತಿ (90) ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ADVERTISEMENT

‘ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಸಂತೋಷದ ವಿಷಯ. 325 ವಿದ್ಯಾರ್ಥಿಗಳಲ್ಲಿ 300 ಮಂದಿ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದು, ಅವರೆಲ್ಲರಿಗೂ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.