ಬೆಂಗಳೂರು: ಉದ್ಯೋಗಕ್ಕಾಗಿ ₹ 10 ನೀಡಿ ನೋಂದಣಿ ಮಾಡಿಕೊಂಡಿದ್ದ ನಗರದ ನಿವಾಸಿಯೊಬ್ಬರು ₹ 1.44 ಲಕ್ಷ ಕಳೆದುಕೊಂಡಿದ್ದಾರೆ.
‘ಆರ್.ಎಂ. ನಗರದ 25 ವರ್ಷದ ಯುವಕರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ನಯನಾ ಶರ್ಮಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದರು. ಹಲವು ಜಾಲತಾಣಗಳಲ್ಲಿ ವೈಯಕ್ತಿಕ ವಿವರ ಅಪ್‌ಲೋಡ್ ಮಾಡಿದ್ದರು. ನೌಕರಿ ಇಂಟ್ರೊ ಡಾಟ್ ಇನ್ ಜಾಲತಾಣದ ಪ್ರತಿನಿಧಿ ಸೋಗಿನಲ್ಲಿ ಯುವಕನಿಗೆ ಕರೆ ಮಾಡಿದ್ದ ಆರೋಪಿ, ‘₹ 10 ನೀಡಿ ನಮ್ಮ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಿ. ನಿಮಗೆ ಉದ್ಯೋಗದ ಮಾಹಿತಿ ನೀಡಲಾಗುವುದು’ ಎಂದಿದ್ದಳು.
‘ಆರೋಪಿ ಮಾತು ನಂಬಿದ್ದ ದೂರುದಾರ, ಕ್ರೆಡಿಟ್ ಕಾರ್ಡ್ ಬಳಸಿ ನೋಂದಣಿ ಮಾಡಿಕೊಂಡಿದ್ದರು. ಅದಾದ ಕೆಲ ನಿಮಿಷಗಳಲ್ಲೇ ಆರೋಪಿ ಬ್ಯಾಂಕ್ ಖಾತೆಯಿಂದ ₹ 1.44 ಲಕ್ಷ ಕಡಿತವಾಗಿದೆ. ಆರೋಪಿ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ’ ಎಂದೂ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.