ADVERTISEMENT

ರಂಗಶಿಬಿರದಿಂದ ಮನೋವಿಕಾಸ: ಕೆ.ಆರ್.ವೇಣುಗೋಪಾಲ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:24 IST
Last Updated 2 ಮೇ 2019, 19:24 IST
ರಂಗಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರ ಜತೆ ಕುಲಪತಿ ಕೆ.ಆರ್.ವೇಣುಗೋಪಾಲ್ ಹಾಗೂ ಕುಲಸಚಿವ ಬಿ.ಕೆ.ರವಿ.
ರಂಗಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರ ಜತೆ ಕುಲಪತಿ ಕೆ.ಆರ್.ವೇಣುಗೋಪಾಲ್ ಹಾಗೂ ಕುಲಸಚಿವ ಬಿ.ಕೆ.ರವಿ.   

ಕೆಂಗೇರಿ: ‘ಇಂದಿನ ಕಾಲದ ಮಕ್ಕಳಿಗೆ ಕಲಿಯಲು ಬೇಸಿಗೆ ಶಿಬಿರದ ವೇದಿಕೆಗಳಿವೆ. ನಮ್ಮ ಕಾಲದಲ್ಲಿ ಮರಕೋತಿ ಆಟದಲ್ಲೇ ಬೇಸಿಗೆ ಮುಗಿದು ಹೋಗುತ್ತಿತ್ತು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ತಮ್ಮ ಬಾಲ್ಯ ದಿನಗಳನ್ನು ನೆನಪಿಸಿಕೊಂಡರು.

ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಆಯೋಜಿಸಿದ್ದ ಮಕ್ಕಳ ರಂಗಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಬಿರದಲ್ಲಿ ನೂರಾರು ಮಕ್ಕಳು ಒಟ್ಟಾಗಿ ಬೆರೆತು ಕಲಿಯುವ ಅವಕಾಶ ದೊರೆಯುತ್ತದೆ. ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ರಂಗದ ಮೇಲೆ ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಪ್ರಪಂಚವನ್ನು ಸಕಾರಾತ್ಮಕವಾಗಿ ಎದುರಿಸುವ ಶಕ್ತಿ ವೃದ್ಧಿಸುತ್ತದೆ’ ಎಂದು ಹೇಳಿದರು.

ADVERTISEMENT

‘ಪಠ್ಯ ಹಾಗೂ ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಹೊರಬರಲು ರಂಗ ಶಿಬಿರಗಳು ಸಹಕಾರಿಯಾಗಿವೆ. ಇಲ್ಲಿ ಅಂಕ ಗಳಿಕೆಯ ಗೋಜಿಲ್ಲ. ಅನುತ್ತೀರ್ಣವಾಗುವ ಭಯವೂ ಇಲ್ಲ’ ಎಂದು ಕುಲಸಚಿವ ಬಿ.ಕೆ.ರವಿ ಹೇಳಿದರು.

ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‘ಶಿಬಿರದಲ್ಲಿ ಜಾನಪದ, ನೃತ್ಯ, ಯೋಗ, ಹಾಡುಗಾರಿಕೆ, ಕುಸುರಿ ಕಲೆಗಳ ತರಬೇತಿ ನೀಡಲಾಗುತ್ತಿದೆ’ ಎಂದು ಪ್ರದರ್ಶನ ಕಲಾ ವಿಭಾಗದ ನಿರ್ದೇಶಕ ರಾಮಕೃಷ್ಣಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.