ADVERTISEMENT

ಚಿಟಿಕೆ ಸುದ್ದಿಗಳು: ಸೆ. 20ಕ್ಕೆ ಕನ್ನಡ ಚರ್ಚಾಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 20:25 IST
Last Updated 13 ಸೆಪ್ಟೆಂಬರ್ 2025, 20:25 IST
<div class="paragraphs"><p>ಕನ್ನಡ</p></div>

ಕನ್ನಡ

   

20ಕ್ಕೆ ಕನ್ನಡ ಚರ್ಚಾಸ್ಪರ್ಧೆ

ಬೆಂಗಳೂರು: ಉದಯಭಾನು ಕಲಾಸಂಘವು ಸಾಹಿತಿ ಅ.ನ. ಕೃಷ್ಣರಾಯರ ಸ್ಮರಣಾರ್ಥ ಇದೇ 20ರಂದು ಬೆಳಿಗ್ಗೆ 10 ಗಂಟೆಯಿಂದ ಕೆಂಪೇಗೌಡನಗರದಲ್ಲಿರುವ ಸಂಘದ ಸಭಾಂಗಣದಲ್ಲಿ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ ಹಮ್ಮಿಕೊಂಡಿದೆ. 

ADVERTISEMENT

‘ವಿಜ್ಞಾನದ ವಿಕಾಸವೇ ವಿಶ್ವದ ವಿನಾಶಕ್ಕೆ ಕಾರಣ’ ಸ್ಪರ್ಧೆಯ ಚರ್ಚಾ ವಿಷಯವಾಗಿದೆ. ಪಾರಿತೋಷಕ, ವೈಯಕ್ತಿ ಬಹುಮಾನ ಹಾಗೂ ಸಮಾಧಾನಕರ ಬಹುಮಾನವನ್ನು ಸ್ಪರ್ಧೆ ಒಳಗೊಂಡಿದೆ. ಪದವಿಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಪ್ರತಿಯೊಂದು ಕಾಲೇಜಿನಿಂದಲೂ ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳು ಚರ್ಚಾ ವಿಷಯದ ಬಗ್ಗೆ ಪರ ಮತ್ತು ವಿರೋಧದ ಬಗ್ಗೆ ಮಾತನಾಡಬಹುದು. 

ಪ್ರವೇಶ ಶುಲ್ಕ ₹100 ಸಹಿತ ಪ್ರವೇಶ ಪತ್ರವನ್ನು ಇದೇ 17ರೊಳಗೆ ಕಳುಹಿಸಬೇಕು ಎಂದು ಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಂಪರ್ಕಕ್ಕೆ: 080 26601831 ಅಥವಾ 9844192952

ಪ್ರವೇಶ ದಿನಾಂಕ ವಿಸ್ತರಣೆ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸೆಂಟ್ರಲ್‌ ಕಾಲೇಜು ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ಸೆ.30ರವರೆಗೆ ವಿಸ್ತರಿಸಲಾಗಿದೆ.

ಈಗಾಗಲೇ ನಿಗದಿಪಡಿಸಿದ ಸಮಯದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗಾಗಿ ಅವಧಿ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಯ ದಾಖಲೆ, ಅವುಗಳ ಪ್ರತಿಯೊಂದಿಗೆ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಬೇಕು. ಸ್ಥಳದಲ್ಲಿಯೇ ಪ್ರವೇಶ ಪ್ರಕ್ರಿಯೆ ಪೂರೈಸಿ, ಶುಲ್ಕ ಸಂದಾಯ ಮಾಡಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.