ADVERTISEMENT

ಕಸಾಪ: ಬೈ–ಲಾ ತಿದ್ದುಪಡಿಗೆ ಅನುಮೋದನೆ

ಸದಸ್ಯತ್ವ ಶುಲ್ಕ ಇಳಿಕೆ ಸೇರಿ18 ಅಂಶಗಳು ಹೊಸದಾಗಿ ಜಾರಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:21 IST
Last Updated 6 ಜುಲೈ 2022, 16:21 IST
   

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈ–ಲಾ ತಿದ್ದುಪಡಿಗೆಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯಿಂದ ಅನುಮೋದನೆ ದೊರೆತಿದೆ. ಇದರಿಂದಾಗಿ ಸದಸ್ಯತ್ವ ಶುಲ್ಕ ಇಳಿಕೆ, ಸ್ಮಾರ್ಟ್‌ ಕಾರ್ಡ್‌ ವಿತರಣೆ ಸೇರಿದಂತೆ 18 ಅಂಶಗಳು ಹೊಸದಾಗಿ ಜಾರಿಯಾಗಲಿವೆ.

ಸಾವಿರ ರೂಪಾಯಿಯ ಸದಸ್ಯತ್ವ ಶುಲ್ಕವು (ಕನ್ನಡ ನುಡಿ ಶುಲ್ಕ ₹ 500 ಸಹಿತ) ₹ 250ಕ್ಕೆ ಇಳಿಕೆಯಾಗಲಿದೆ. ಗುರುತಿನ ಚೀಟಿಯನ್ನು ಸ್ಮಾರ್ಟ್‌ಕಾರ್ಡ್ ರೂಪದಲ್ಲಿ ವಿತರಿಸಲಾಗುತ್ತದೆ. ಇದಕ್ಕಾಗಿ ಸ್ಮಾರ್ಟ್‌ಕಾರ್ಡ್ ವೆಚ್ಚ ಮತ್ತು ಸ್ಪೀಡ್ ಪೋಸ್ಟ್ ಅಂಚೆ ವೆಚ್ಚ ₹ 150 ಪಾವತಿಸಬೇಕಾಗುತ್ತದೆ. ಸದಸ್ಯತ್ವ ಪಡೆಯಲು ಪ್ರಾಥಮಿಕ ಶಿಕ್ಷಣವನ್ನು ವಿದ್ಯಾರ್ಹತೆಯಾಗಿ ನಿಗದಿಪಡಿಸಲಾಗಿದೆ.ಜಾನಪದ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಕೃಷಿಕರು, ಕುಶಲ ಕರ್ಮಿಗಳು, ಕಾರ್ಮಿಕರು, ಇನ್ನಿತರೆ ಸಾಮಾನ್ಯ ವ್ಯಕ್ತಿಗಳು ಹಾಗೂ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಶ್ರಮಿಸಿದವರಿಗೆ ವಿದ್ಯಾರ್ಹತೆಯಿಂದ ವಿನಾಯಿತಿ ನೀಡಲಾಗುತ್ತದೆ.‌

‘ಪರಿಷತ್ತಿನ ಬೈ–ಲಾದಲ್ಲಿ ಆಮೂಲಾಗ್ರ ಬದಲಾವಣೆ ತಂದು, ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಬಂಧನೆಗಳ ತಿದ್ದುಪಡಿಗೆ ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯವರು ಅಂಗೀಕರಿಸಿ, ನೋಂದಾಯಿಸಿದ್ದಾರೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ADVERTISEMENT

‘ಪರಿಷತ್ತಿನ ಮುಂದಿನ ಚುನಾವಣೆ 2026ರಲ್ಲಿ ನಡೆಯಲಿದೆ. ಮೊಬೈಲ್ ಆ್ಯಪ್ ಮೂಲಕ ಮತದಾನ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ 2025ರಲ್ಲಿ ತಿದ್ದುಪಡಿ ತರಲಾಗುವುದು.ಆನ್‌ಲೈನ್ ಮೂಲಕಸದಸ್ಯತ್ವ ನೋಂದಣಿಗೆ ಆ್ಯಪ್ಸಿದ್ಧಗೊಂಡಿದೆ. ಆ್ಯಪ್ಮತ್ತುಪರಿಷ್ಕೃತಜಾಲತಾಣವನ್ನು (ವೆಬ್ಸೈಟ್) ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.