ADVERTISEMENT

ಅರುಂಧತಿ ನಾಗ್, ಹಿದಾಯತ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 16:31 IST
Last Updated 1 ಫೆಬ್ರುವರಿ 2023, 16:31 IST
ಅರುಂಧತಿ ನಾಗ್‌
ಅರುಂಧತಿ ನಾಗ್‌   

ಬೆಂಗಳೂರು: ಶ್ರೀಮಾತಾ ಚಾರಿಟಬಲ್ ಟ್ರಸ್ಟ್‌ ಮತ್ತು ಸೆಂಟರ್‌ ಸ್ಟೇಜ್‌ ಈ ವರ್ಷದಿಂದ ನೀಡುವ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’ಗೆ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಅರುಂಧತಿ ನಾಗ್, ‘ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ’ಗೆ ಜಾನಪದ ಕಲಾವಿದ ಹಿದಾಯತ್‌ ಅಹಮದ್ ಆಯ್ಕೆಯಾಗಿದ್ದಾರೆ.

ಫೆ. 4ರಂದು ತುಮಕೂರು ಜಿಲ್ಲೆಯ ಚಿಕ್ಕನಾಕನಹಳ್ಳಿಯ ಹುಳಿಯಾರ್‌ನಲ್ಲಿ ನಡೆಯುವ ಚಿಂತಕ ಶ್ರೀನಿವಾಸ ಜಿ. ಕಪ್ಪಣ್ಣ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ‘ಕಪ್ಪಣ್ಣ–75 ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಸ್. ವಿದ್ಯಾರಣ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಯು ₹50,000 ಮತ್ತು ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿಯು ₹25,000 ನಗದು ಬಹುಮಾನ ಒಳಗೊಂಡಿದೆ.

ADVERTISEMENT

ಕಾರ್ಯಕ್ರಮವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದು, ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಇ. ರಾಧಾಕೃಷ್ಣ, ನಟಿ ಗಿರಿಜಾ ಲೋಕೇಶ್, ಕಿರಣ್‌ ಹುಳಿಯಾರ್, ವತ್ಸಲಾ ಮೋಹನ್‌ ಭಾಗವಹಿಸಲಿದ್ದಾರೆ. ಜಾನಪದ ತಂಡಗಳ ಪ್ರದರ್ಶನ, ಕಿನ್ನರಿ ಮೇಳ ಸೇರಿ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.