ADVERTISEMENT

ಕರ್ಣಾಟಕ ಬ್ಯಾಂಕ್ ಸಿಇಒ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 19:57 IST
Last Updated 29 ಜೂನ್ 2025, 19:57 IST
   

ಬೆಂಗಳೂರು: ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮ ಅವರ ರಾಜೀನಾಮೆಯನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಅಂಗೀಕರಿಸಿದ್ದು, ಆ ಸ್ಥಾನಕ್ಕೆ ಹೊಸಬರನ್ನು ಗುರುತಿಸಲು ಶೋಧ ಸಮಿತಿಯನ್ನು ರಚಿಸಿದೆ.

ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ ರಾವ್ ಅವರ ರಾಜೀನಾಮೆಯನ್ನೂ ಆಡಳಿತ ಮಂಡಳಿ ಒಪ್ಪಿದೆ. ಶೋಧ ಸಮಿತಿಯು ಅವರ ಸ್ಥಾನಕ್ಕೆ ಹೊಸಬರನ್ನು ಹುಡುಕಲಿದೆ.

ಶರ್ಮ ಅವರು ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ್ದಾರೆ, ಮುಂಬೈಗೆ ವಾಪಸ್ಸಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಶರ್ಮ ಅವರ ರಾಜೀನಾಮೆಯು ಜುಲೈ 15ರಿಂದ ಅನ್ವಯ ಆಗಲಿದೆ. ರಾವ್ ಅವರ ರಾಜೀನಾಮೆ ಜುಲೈ 31ರಿಂದ ಅನ್ವಯ ಆಗಲಿದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.