
ಪ್ರಜಾವಾಣಿ ವಾರ್ತೆ
ಸಾದರ ಸ್ವೀಕಾರ
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಲೇಖಕಿಯರಾದ ಆರ್. ಸುನಂದಮ್ಮ ಮತ್ತು ನಿರ್ಮಲಾ ಸಿ. ಎಲಿಗಾರ್ ಸ್ಪರ್ಧಿಸಿದ್ದು, ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ರಾಜ್ಯದಾದ್ಯಂತ 1,600 ಮತದಾರರಿದ್ದಾರೆ. ಇವರಲ್ಲಿ ಬೆಂಗಳೂರು ಹೊರತುಪಡಿಸಿ, ಇತರೆ ಜಿಲ್ಲೆಗಳಿಂದ ಅಂಚೆ ಮೂಲಕ ಮತದಾನ ನಡೆದಿದೆ. ಬೆಂಗಳೂರಿನಲ್ಲಿ 700 ಮತದಾರರಿದ್ದು, ಭಾನುವಾರ ಮತದಾನ ನಡೆಯಲಿದೆ. ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಆರ್. ಪ್ರತಿಭಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.