ADVERTISEMENT

‘ಕಾಶ್ಮೀರ ಜನತೆಗೆ ತಮ್ಮ ಭವಿಷ್ಯ ನಿರ್ಧರಿಸುವ ವಿವೇಚನೆಯಿತ್ತು’

ವಕೀಲ ಬಾಪು ಹೆದ್ದೂರ ಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 19:49 IST
Last Updated 7 ಸೆಪ್ಟೆಂಬರ್ 2019, 19:49 IST
ಬಾಪು ಹೆದ್ದೂರ ಶೆಟ್ಟಿ
ಬಾಪು ಹೆದ್ದೂರ ಶೆಟ್ಟಿ   

ಬೆಂಗಳೂರು: ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ಮುನ್ನ ಸರ್ಕಾರ ಅಲ್ಲಿನ ಜನತೆಯ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು. ಅವರಿಗೆ ತಮ್ಮ ಭವಿಷ್ಯ ನಿರ್ಧರಿಸುವ ವಿವೇಚನೆ ಇತ್ತು’ ಎಂದು ವಕೀಲಬಾಪು ಹೆದ್ದೂರ ಶೆಟ್ಟಿ ತಿಳಿಸಿದರು.

ಸಮಾಜವಾದಿ ಅಧ್ಯಯನ ಕೇಂದ್ರ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕಾಶ್ಮೀರದ ಬಗ್ಗೆ ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿಶೇಷ ಸ್ಥಾನಮಾನ ನೀಡುವಸಂವಿಧಾನದ 370ನೇ ವಿಧಿ ರದ್ದು ಮಾಡುವುದಾಗಿ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿತ್ತು. ಜನತೆ ಚುನಾವಣೆಯಲ್ಲಿ ಬಹುಮತ ನೀಡಿ
ದ್ದಾರೆ ಎಂಬ ಮಾತ್ರಕ್ಕೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವುದು ಸರಿಯಲ್ಲ. ಕಾಶ್ಮೀರದ ವಿಚಾರದಲ್ಲಿ ಜನಾಭಿಪ್ರಾಯ ಪಡೆಯದೇ ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಕ್ಕೂ ಆದ್ಯತೆ ನೀಡಬೇಕು. 10 ವರ್ಷಗಳಲ್ಲಿ ಕೈಗಾರಿಕೆಗಳು ತಲೆಯೆತ್ತಿ, ಕಾಶ್ಮೀರ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಬ್ರಿಟಿಷರು ಭಾರತದ ವಿಚಾರವಾಗಿ ಕೂಡಾ ಇದನ್ನೇ ಹೇಳಿದ್ದರು. ಮಹಾರಾಜರು, ಸರ್ವಾಧಿಕಾರಿಗಳು ರಾಜ್ಯದ ಭವಿಷ್ಯ ನಿರ್ಧರಿಸು
ತ್ತಿದ್ದರು. ಅದೇ ಸ್ಥಿತಿ ಇದೀಗ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಚಿಂತಕ ಜಿ.ಎನ್. ನಾಗರಾಜ್ ಮಾತನಾಡಿ, ‘ಜಮ್ಮು ಮತ್ತು ಕಾಶ್ಮೀರದಲ್ಲಿಕಾರ್ಪೋರೇಟ್ ದುರಾಕ್ರಮಣ ನಡೆಯುತ್ತಿದೆ. ಅಲ್ಲಿನ ಮುಸ್ಲಿಮರನ್ನು ಅಲ್ಪಸಂಖ್ಯಾತರನ್ನಾಗಿಸುವ ಸಂಚು ಇದಾಗಿದೆ. ವಾಸ್ತವದಲ್ಲಿ ಅಲ್ಲಿನ ಜನತೆ ಸಂಭ್ರಮಿಸುವ ಮನಸ್ಥಿತಿಯಲ್ಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.