ADVERTISEMENT

ರಾಜೇಂದ್ರ ಚೆನ್ನಿಗೆ ‘ಕಾವ್ಯಾನಂದ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 0:54 IST
Last Updated 19 ಅಕ್ಟೋಬರ್ 2025, 0:54 IST
<div class="paragraphs"><p>ರಾಜೇಂದ್ರ ಚೆನ್ನಿ</p></div>

ರಾಜೇಂದ್ರ ಚೆನ್ನಿ

   

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ 2024ರ ‘ಕಾವ್ಯಾನಂದ ಪುರಸ್ಕಾರ’ಕ್ಕೆ ರಾಜೇಂದ್ರ ಚೆನ್ನಿ ಅವರ ‘ಸಾಂಸ್ಕೃತಿಕ ರಾಜಕೀಯ–ಇಂದಿನ ಇತಿಹಾಸ’ ಕೃತಿ ಆಯ್ಕೆಯಾಗಿದೆ.

ಡಾ. ಸಿದ್ಧಯ್ಯ ಪುರಾಣಿಕ ಅವರ ಕಾವ್ಯನಾಮವಾದ ‘ಕಾವ್ಯಾನಂದ’ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ADVERTISEMENT

2025ರ ಡಿಸೆಂಬರ್‌ 19ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟ್‌ ಅಧ್ಯಕ್ಷೆ ವಿಜಯಾ ನಂದೀಶ್ವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.