ಬೆಂಗಳೂರು: ತುಮಕೂರು ರಸ್ತೆಯಲ್ಲಿ ನೈಸ್ ಸಂಸ್ಥೆಯಿಂದ ನಮ್ಮ ಮೆಟ್ರೊಗೆ ಜಾಗ ಸಿಗಬೇಕಿದ್ದು, ನೈಸ್‌ಗೆ ಕೊಡಬೇಕಿರುವ ಹಣವನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಿ ಕೆಲಸ ಆರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.
ಇಲ್ಲಿನ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ನಮ್ಮ ಮೆಟ್ರೊ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರಿಂದಾಗಿ ಮೆಟ್ರೊ ಕಾಮಗಾರಿಗಳು ವಿಳಂಬವಾಗುವುದು ಬೇಡ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
‘ಹೊಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ಮೆಟ್ರೊ ಕಾಮಗಾರಿಗಳಿಗಾಗಿ 4 ಎಕರೆ ಜಾಗ ಬೇಕು. ಮೂಲ ಮಾಲೀಕರಿಂದ ಕೆಲ ಜಾಗನೈಸ್‌ಗೆಹೋಗಿದೆ. ಅದು ಈಗ ನೈಸ್ ಕಡೆಯಿಂದ ಮೆಟ್ರೊಗೆ ಬರಬೇಕಿದೆ. ಕೆಲವು ಕಡೆ ಸರ್ಕಾರಿ ಜಾಗವನ್ನು ಭೋಗ್ಯಕ್ಕೆ ನೀಡಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬ ಆಗಿದೆ.ಖೇಣಿ ಅವರು ಇನ್ನೂ ನ್ಯಾಯಾಲಯದಿಂದ ಪ್ರಕರಣ ವಾಪಸ್ ಪಡೆದಿಲ್ಲ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.