ಪೀಣ್ಯ ದಾಸರಹಳ್ಳಿ: '500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಸ್ಮಾರ್ಟ್ ಸಿಟಿಯ ಪರಿಕಲ್ಪನೆಯಲ್ಲಿ ನಗರಗಳನ್ನು ನಿರ್ಮಿಸಿದ್ದರು' ಎಂದು ಮಾಜಿ ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದರು. ಬಾಗಲಗುಂಟೆಯಲ್ಲಿ ನಡೆದ ಕೆಂಪೇಗೌಡ ಜಯಂತ್ಯುತ್ಸವ ಮತ್ತು 'ನಾಡಪ್ರಭು ಕೆಂಪೇಗೌಡ' ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
'ನಗರದಲ್ಲಿ ಕಸುಬು ಆಧಾರಿತ ಸಮುದಾಯಗಳಿಗೆ ಕೆಲಸ ಕೊಟ್ಟು ಉತ್ತಮ ಆಡಳಿತವನ್ನು ನೀಡಿದವರು ಕೆಂಪೇಗೌಡರು' ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ವಿಜಯನಗರ ಶಾಖ ಮಠದ ಪೀಠಾಧ್ಯಕ್ಷ ಸೌಮ್ಯನಾಥ ಸ್ವಾಮೀಜಿ, ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಮಾತನಾಡಿದರು. ಶಾಸಕ ಎಸ್. ಮುನಿರಾಜು ಅವರಿಗೆ 'ಶಾಸಕ ಸರ್ವೋತ್ತಮ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ವೈ.ಬಿ.ಎಚ್. ಜಯದೇವ್ ರಚಿಸಿರುವ 'ನಾಡಪ್ರಭು ಕೆಂಪೇಗೌಡ' ಕಾದಂಬರಿ ಬಿಡುಗಡೆ ಮಾಡಲಾಯಿತು. 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹತ್ತು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.