ADVERTISEMENT

ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 19:39 IST
Last Updated 17 ನವೆಂಬರ್ 2025, 19:39 IST
   

ಬೆಂಗಳೂರು: ಕೇರಳದ ಕೋಯಿಕ್ಕೋಡ್‌ನಲ್ಲಿ ಕೇರಳ ಸಾಹಿತ್ಯ ಉತ್ಸವದ(ಕೆಎಲ್‌ಎಫ್‌) 9ನೇ ಆವೃತ್ತಿಯು 2026ರ ಜ.22ರಿಂದ 25ರವರೆಗೆ ನಡೆಯಲಿದೆ.

ಬುಕರ್ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಬಾನು ಮುಷ್ತಾಕ್‌, ದೀಪಾ ಭಾಸ್ತಿ ಸಹಿತ ದೇಶ, ಹೊರ ದೇಶಗಳ ಸಾಹಿತಿಗಳು, ನೊಬೆಲ್ ಪ್ರಶಸ್ತಿ ಪುರಸ್ಕೃತರು, ಇತಿಹಾಸ ತಜ್ಞರು, ವಿಜ್ಞಾನಿಗಳು, ತತ್ವಜ್ಞಾನಿಗಳು, ಉದ್ಯಮಿಗಳು, ಕಲಾವಿದರು ಸಾಹಿತ್ಸ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿಯ ಮುಖ್ಯ ಸಂಚಾಲಕ ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮುದ್ರತೀರದಲ್ಲಿ ಆಯೋಜನೆಗೊಂಡಿರುವ ಉತ್ಸವದಲ್ಲಿ 15 ದೇಶಗಳ 400ಕ್ಕೂ ಹೆಚ್ಚು ಭಾಷಣಕಾರರು 250 ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ರಾಜಕೀಯ, ಇತಿಹಾಸ, ಸಮಕಾಲೀನ ಸಂಸ್ಕೃತಿ, ವಿಜ್ಞಾನ ಮತ್ತು ತತ್ವಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT