ADVERTISEMENT

ಮೂತ್ರಪಿಂಡ ಸಮಸ್ಯೆ: ಬಾಲಕನಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:13 IST
Last Updated 26 ಮೇ 2022, 20:13 IST

ಬೆಂಗಳೂರು: ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದ 12 ವರ್ಷದ ಬಾಲಕನಿಗೆ ಎನ್‌ಯು ಆಸ್ಪತ್ರೆಯು ವರ್ಸಿಯಸ್ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ಶಾನುಭೋಗನಹಳ್ಳಿಯಲ್ಲಿ ನೆಲೆಸಿರುವ ಬಾಲಕನಿಗೆ ಕೆಲ ದಿನಗಳಿಂದ ಮೂತ್ರಪಿಂಡದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವುನಿಂದಾಗಿ ಬೆನ್ನು ನೋವು ಸಮಸ್ಯೆಯನ್ನೂ ಎದುರಿಸಬೇಕಾಗಿತ್ತು. 4 ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

‘ವರ್ಸಿಯಸ್ ರೋಬೋಟಿಕ್ ತಂತ್ರಜ್ಞಾನದಿಂದಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನೂ ಸುಲಭವಾಗಿ ನಡೆಸಬಹುದು. ರೋಗಿಯು ಶಸ್ತ್ರಚಿಕಿತ್ಸೆ ನಡೆದ ದಿನವೇ ಮನೆಗೆ ತೆರಳಬಹುದು’ ಎಂದು ಆಸ್ಪತ್ರೆಯ ಮಕ್ಕಳ ಮೂತ್ರ ತಜ್ಞ ಡಾ. ಪ್ರಸನ್ನ ವೆಂಕಟೇಶ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.