ADVERTISEMENT

ಕೃಷ್ಣ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 16:38 IST
Last Updated 18 ಸೆಪ್ಟೆಂಬರ್ 2025, 16:38 IST
   

ಬೆಂಗಳೂರು: ಕೃಷ್ಣ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸಸ್‌ನ (ಕಿಮ್ಸ್‌) ಕರ್ನಾಟಕದ ಮೊದಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ ಎಂದು ಘೋಷಿಸಿದೆ.

ಅತ್ಯಾಧುನಿಕ ಸೌಲಭ್ಯ ಹೊಂದಿರುವ 450 ಹಾಸಿಗೆಗಳ, ಮಲ್ಟಿ ಸ್ಪೆಷಾಲಿಟಿ ತೃತೀಯ ಆರೈಕೆ ಆಸ್ಪತ್ರೆಯಾಗಿದೆ. ಆಸ್ಪತ್ರೆಯು 35ಕ್ಕೂ ಹೆಚ್ಚು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಶೇಷತೆಗಳು, 120ಕ್ಕೂ ಅಧಿಕ ಸುಧಾರಿತ ಐಸಿಯು ಹಾಸಿಗೆಗಳು ಮತ್ತು 100ಕ್ಕೂ ಹೆಚ್ಚು ಹೊರರೋಗಿ ವಿಭಾಗದ(ಒಪಿಡಿ) ಕೊಠಡಿಗಳನ್ನು ಹೊಂದಿದೆ.

‘ಬೆಂಗಳೂರಿನಲ್ಲಿ ನಮ್ಮ ಮೊದಲ ಆಸ್ಪತ್ರೆ ಉದ್ಘಾಟನೆ ಆಗಿರುವುದರಿಂದ ಎಲ್ಲರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಶೀಘ್ರದಲ್ಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಮ್ಮ ಎರಡನೇ ಘಟಕವನ್ನು ತೆರೆಯಲಾಗುವುದು’ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ADVERTISEMENT

ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಆಸ್ಪತ್ರೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಿಮ್ಸ್‌ ಒಂದಾಗಿದೆ. ಇದು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ 25 ಆಸ್ಪತ್ರೆಗಳು ಮತ್ತು 8,300ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ. ಹೃದಯ ಚಿಕಿತ್ಸೆ, ಅಂಕಾಲಜಿ, ನರವಿಜ್ಞಾನ, ಮೂಳೆಚಿಕಿತ್ಸೆ, ಅಂಗಾಂಗ ಕಸಿ, ಮೂತ್ರಪಿಂಡ, ತಾಯಿ ಮತ್ತು ಮಗುವಿನ ಆರೈಕೆ ಸೇರಿದಂತೆ 25 ವಿಶೇಷ ಮತ್ತು ಸಮಗ್ರ ಆರೋಗ್ಯ ಸೇವೆಗಳನ್ನು ಕಿಮ್ಸ್ ನೀಡುತ್ತಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.