ADVERTISEMENT

ಕೊಡಿಗೇಹಳ್ಳಿ ಉತ್ಸವ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 18:39 IST
Last Updated 24 ಅಕ್ಟೋಬರ್ 2018, 18:39 IST
ದೇವಸ್ಥಾನದ ಆವರಣದಲ್ಲಿ ವಿಜಯ ದಶಮಿ ಅಂಗವಾಗಿ ದೇವರಿಗೆ ಪೂಜೆ ಸಲ್ಲಿಸಲಾಯಿತು
ದೇವಸ್ಥಾನದ ಆವರಣದಲ್ಲಿ ವಿಜಯ ದಶಮಿ ಅಂಗವಾಗಿ ದೇವರಿಗೆ ಪೂಜೆ ಸಲ್ಲಿಸಲಾಯಿತು   

ಬೆಂಗಳೂರು: ಮಾಗಡಿ ಮುಖ್ಯರಸ್ತೆ ಎಲೆಕೊಡಿಗೇಹಳ್ಳಿ ಶ್ರೀಆದಿಶಕ್ತಿ ಮದನಘಟ್ಟಮ್ಮ ದೇವಸ್ಥಾನದ ಆವರಣದಲ್ಲಿ ವಿಜಯ ದಶಮಿ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ಈಚೆಗೆ ವಿಜೃಂಭಣೆಯಿಂದ ನಡೆದವು.

ಮದನಘಟ್ಟಮ್ಮ, ಬಸವೇಶ್ವರ ಹಾಗೂ ವೀರಭದ್ರಸ್ವಾಮಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಎನ್.ನಂಜುಂಡೇಶ್ ಮಾತನಾಡಿ, ‘ನಮ್ಮ ಪರಂಪರೆ, ಸಂಸ್ಕೃತಿ ಇತಿಹಾಸದ ಭಾಗವಾಗಿರುವ ಹಬ್ಬ, ಉತ್ಸವ, ಜಾತ್ರಾ ಮಹೋತ್ಸವಗಳು ಜಾತ್ಯತೀತ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ. ಸಮಾಜದ ಎಲ್ಲ ವರ್ಗದವರನ್ನೂ ಒಂದುಗೂಡಿಸಿ ಸ್ವಸ್ಥ ಸಮಾಜ ನಿರ್ಮಾಣ ಸಾಕಾರಗೊಳ್ಳಲು ಪ್ರೇರಣೆಯಾಗಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.