ADVERTISEMENT

ಕೊಟ್ಟಿಗೆಪಾಳ್ಯ ತಂಗುದಾಣದಲ್ಲಿ ಅವ್ಯವಸ್ಥೆ: ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:51 IST
Last Updated 22 ಮೇ 2019, 19:51 IST
ಕೊಟ್ಟಿಗೆಪಾಳ್ಯದಲ್ಲಿ ಇರುವ ಪ್ರಯಾಣಿಕರ ತಂಗುದಾಣ
ಕೊಟ್ಟಿಗೆಪಾಳ್ಯದಲ್ಲಿ ಇರುವ ಪ್ರಯಾಣಿಕರ ತಂಗುದಾಣ   

ರಾಜರಾಜೇಶ್ವರಿನಗರ: ಕೊಟ್ಟಿಗೆಪಾಳ್ಯದಲ್ಲಿ ಇರುವ ಪ್ರಯಾಣಿಕರ ತಂಗುದಾಣದಲ್ಲಿನ ಅವ್ಯವಸ್ಥೆಗಳಿಂದಾಗಿ ಬಸ್‌ಗಾಗಿ ಕಾಯುವ ಜನರಿಗೆ ತೊಂದರೆ ಆಗುತ್ತಿದೆ.

ತಂಗುದಾಣದ ಚಾವಣಿ ಕಿತ್ತುಹೋಗಿದೆ. ಮಳೆಬಂದಾಗ ಸೋರುತ್ತದೆ. ನೆಲಹಾಸು ಕಿತ್ತುಹೋಗಿದೆ. ತಂಗುದಾಣದ ಹಿಂಬದಿಯಲ್ಲಿ ರಾಜಕಾಲುವೆ ಇದೆ. ಮಳೆ ಬಂದಾಗ ಕಾಲುವೆ ತುಂಬಿಕೊಳ್ಳುತ್ತದೆ. ಇಲ್ಲಿ ವಿದ್ಯುತ್‌ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದ ಜನರಿಗೆ ಅಪಾಯ ಸಂಭವಿಸಬಹುದಾಗಿದೆ.ಜನರು ಅಂಗಡಿ–ಮುಂಗಟ್ಟುಗಳ ಕೆಳಗೆ ನಿಂತು ಬಸ್‌ಗಾಗಿ ಕಾಯುತ್ತಾರೆ.

ಮಾಗಡಿ,ತಾವರೆಕೆರೆ, ನಾಗರಬಾವಿ, ಪಾಪರೆಡ್ಡಿಪಾಳ್ಯ, ಕೆಂಗೇರಿ, ಬಿಡದಿ, ಕುಣಿಗಲ್, ಹುಲಿಯೂರುದುರ್ಗ, ಸುಂಕದಕಟ್ಟೆ ಕಡೆಗೆ ತೆರಳುವ ಜನರು ಈ ತಂಗುದಾಣದಲ್ಲಿ ಕಾಯುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.