ADVERTISEMENT

‘ಮೊದಲು ನಾವು ಬದಲಾಗಬೇಕು’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:18 IST
Last Updated 9 ಅಕ್ಟೋಬರ್ 2018, 19:18 IST
ಪ್ರತಿಭಾ ಪುರಸ್ಕಾರ ಪಡೆದ ಕಾರ್ಮಿಕರ ಮಕ್ಕಳನ್ನು ಎನ್‌.ಸಂತೋಷ್‌ ಹೆಗ್ಡೆ ಮತ್ತು ಈಶ್ವರ ಖಂಡ್ರೆ ಅಭಿನಂದಿಸಿದರು. ಸಂಘದ ಅಧ್ಯಕ್ಷ ಬಿ.ದೇವರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರತಿಭಾ ಪುರಸ್ಕಾರ ಪಡೆದ ಕಾರ್ಮಿಕರ ಮಕ್ಕಳನ್ನು ಎನ್‌.ಸಂತೋಷ್‌ ಹೆಗ್ಡೆ ಮತ್ತು ಈಶ್ವರ ಖಂಡ್ರೆ ಅಭಿನಂದಿಸಿದರು. ಸಂಘದ ಅಧ್ಯಕ್ಷ ಬಿ.ದೇವರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜದ ವ್ಯವಸ್ಥೆ ಕಲುಷಿತಗೊಂಡಿದೆ. ಇದಕ್ಕೆ ಯಾವುದೇ ಸಂಘ, ಪಕ್ಷ ಕಾರಣವಲ್ಲ. ಇಡೀ ಸಮಾಜದ ವ್ಯವಸ್ಥೆ ಕಾರಣ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ, ಐಎನ್‌ಟಿಯುಸಿ ಬೆಂಗಳೂರು ನಗರ ನಗರದಲ್ಲಿ ಆಯೋಜಿಸಿದ್ದ ಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.

‘ಬೇರೊಬ್ಬರು ಬದಲಾಗಬೇಕು ಎನ್ನುತ್ತೇವೆಯೇ ಹೊರತು, ನಾವು ಬದಲಾಗುವುದಿಲ್ಲ. ಮೊದಲು ನಾವು ಬದಲಾದಾಗ ಮಾತ್ರ ಸಮಾಜ ಬದಲಾಗಲು ಸಾಧ್ಯ’ ಎಂದರು.

ADVERTISEMENT

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ‘ಸಮಾಜ ಬದಲಾಗಿದೆ. ಭ್ರಷ್ಟರನ್ನು ಕರೆದು ಹಾರ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ– ಕಾಲೇಜುಗಳಲ್ಲಿ ಮಕ್ಕಳಿಗೆ ಮೌಲ್ಯ, ನೈತಿಕತೆಯ ಪಾಠ ಮಾಡುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.