ADVERTISEMENT

ಆಟೊಗಳಲ್ಲಿ ನಿಗದಿಗಿಂತ ಹೆಚ್ಚು ಬಾಡಿಗೆ ವಸೂಲಿ: ದೂರು

ಕೆ.ಆರ್‌.ಪುರ: ಪೊಲೀಸ್‌ ಜನಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:16 IST
Last Updated 28 ನವೆಂಬರ್ 2020, 20:16 IST
ಜನಸಂಪರ್ಕ ಸಭೆಯಲ್ಲಿ ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ದೇವರಾಜ್, ಎಸಿಪಿ ಮನೋಜ್ ಕುಮಾರ್, ಠಾಣಾಧಿಕಾರಿ ಅಂಬರೀಷ್‌ ಅವರು ಜನರ ಅಹವಾಲು ಆಲಿಸಿದರು
ಜನಸಂಪರ್ಕ ಸಭೆಯಲ್ಲಿ ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ದೇವರಾಜ್, ಎಸಿಪಿ ಮನೋಜ್ ಕುಮಾರ್, ಠಾಣಾಧಿಕಾರಿ ಅಂಬರೀಷ್‌ ಅವರು ಜನರ ಅಹವಾಲು ಆಲಿಸಿದರು   

ಕೆ.ಆರ್.ಪುರ: ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರು ದುಮ್ಮಾನ ಹೇಳಿಕೊಂಡರು. ಜನರ ಅಹವಾಲುಗಳನ್ನು ಆಲಿಸಿದ ಪೊಲೀಸ್‌ ಅಧಿಕಾರಿಗಳು ಕೆಲವೊಂದಿಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು.

ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ದೇವರಾಜ್, ‘ಅನೇಕರು ಠಾಣೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೆಲವರು ವ್ಯಯುಕ್ತಿಕ ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ, ಕೆಲವು ಸಮಸ್ಯೆಗಳನ್ನು ಪರಿಹರಿಸಲು ಗಡುವು ನೀಡಿದ್ದೇನೆ’ ಎಂದರು.

‘ಆಟೊ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಆಟೊಚಾಲಕರ ಸಭೆ ನಡೆಸಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಬಾಡಿಗೆ ಪಡೆಯದಂತೆ ಸಲಹೆ ನೀಡಲಾಗುವುದು. ಸರಗಳ್ಳತನ ನಡೆಯದಂತೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಗಸ್ತು ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಲಾಗುವುದು. ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘112 ಸಹಾಯವಾಣಿ ಮೂಲಕವೂ ಜನರು ದೂರು ದಾಖಲಿಸಬಹುದು. ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.