ADVERTISEMENT

ಮೇಲುಕೋಟೆ:ಕೃಷ್ಣರಾಜಮುಡಿ ಉತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:55 IST
Last Updated 22 ಜುಲೈ 2019, 19:55 IST
ಕೃಷ್ಣರಾಜಮುಡಿ ಕಿರೀಟ
ಕೃಷ್ಣರಾಜಮುಡಿ ಕಿರೀಟ   

ಮೇಲುಕೋಟೆ: ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಇಂದು ಕೃಷ್ಣರಾಜಮುಡಿ ಉತ್ಸವ ನಡೆಯ
ಲಿದೆ.‌

ಮೈಸೂರು ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಮರ್ಪಿಸಿರುವ, ಕೆಂಪು ಮತ್ತು ಬಿಳಿಯ ವಜ್ರದ ಕಿರೀಟ ಚೆಲುವನಾರಾಯಣನನ್ನು ಅಲಂಕರಿಸಲಿದೆ. ಈ ಕಿರೀಟವನ್ನು ಮಂಡ್ಯದ ಜಿಲ್ಲಾ ಖಜಾನೆಯಿಂದ ಸಂಜೆ ಮೇಲುಕೋಟೆಗೆ ತರಲಾಗುತ್ತದೆ.

7 ಗಂಟೆಗೆ ವೈರಮುಡಿ ಉತ್ಸವದ ಮಾದರಿಯ ಪ್ರಭಾವಳಿ ಮಧ್ಯೆ ಶ್ರೀದೇವಿ, ಭೂದೇವಿಯರೊಂದಿಗೆ ಗರುಡಾರೂಢನಾದ ಸ್ವಾಮಿಗೆ ಕಿರೀಟ ಧಾರಣೆ ಜೊತೆ ಗಂಡಭೇರುಂಡ ಪದಕ ತೊಡಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.