
ಪ್ರಜಾವಾಣಿ ವಾರ್ತೆ
ಸ್ನೇಹಲ್ ಲೋಖಂಡೆ
ಕೆ.ಆರ್.ಪುರ: ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೂರ್ವ ನಗರಪಾಲಿಕೆ ವತಿಯಿಂದ ಆರು ದಿನಗಳ ಕಾಲ ಹಮ್ಮಿಕೊಂಡಿದ್ದ ಉದ್ದಿಮೆ ಪರವಾನಗಿ ಅಭಿಯಾನವು ಯಶಸ್ಸು ಕಂಡಿದೆ.
ಬೆಂಗಳೂರು ಪೂರ್ವ ನಗರಪಾಲಿಕೆಯ 17 ವಾರ್ಡ್‌ಗಳಲ್ಲಿ ಏಕ ಗವಾಕ್ಷಿ ಮಾದರಿಯಲ್ಲಿ 466 ಉದ್ದಿಮೆದಾರರು ದಾಖಲೆಯ ₹25,52,800 ತೆರಿಗೆ ಪಾವತಿಸಿದರು. ಅಲ್ಲದೇ ಸ್ವಯಂ ಪ್ರೇರಿತರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮಧ್ಯವರ್ತಿಗಳಿಲ್ಲದೆ ಉದ್ದಿಮೆ ಪರವಾನಗಿ ಪಡೆದುಕೊಂಡರು.
ಹೆಚ್ಚುವರಿ ಆಯುಕ್ತರಾದ ಸ್ನೇಹಲ್ ಲೋಖಂಡೆ, ಅರೋಗ್ಯಧಿಕಾರಿ ಡಾ.ಸವಿತಾರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.