ADVERTISEMENT

ಕೆಎಸ್‌ಎಂಎಸ್‌ಸಿಎಲ್: ವೈದ್ಯಕೀಯ ತಪಾಸಣಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:25 IST
Last Updated 7 ಮೇ 2025, 15:25 IST
   

ಬೆಂಗಳೂರು: ಔಷಧ, ವೈದ್ಯಕೀಯ ಉಪಕರಣಗಳ ಖರೀದಿಗೆ ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ನಡೆಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ಬಿಡ್ಡುದಾರರ ಸಂಸ್ಥೆ, ಘಟಕಗಳ ತಪಾಸಣೆಗೆ ವೈದ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. 

ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಎಸ್‌ಎಂಎಸ್‌ಸಿಎಲ್ ಖರೀದಿಸಿ, ಪೂರೈಸುವ ಔಷಧ ಉಪಕರಣಗಳ ಗುಣಮಟ್ಟದ ಬಗ್ಗೆ, ಎನ್‌ಎಬಿಎಲ್ (ನ್ಯಾಷನಲ್ ಅಕ್ರಿಡಿಯೇಶನ್ ಬೋರ್ಡ್ ಫಾರ್ ಲ್ಯಾಬರೋಟರೀಸ್) ಪ್ರಯೋಗಾಲಯಗಳ ಉತ್ಪಾದನಾ ಘಟಕಗಳ ಮೌಲ್ಯಮಾಪನಕ್ಕೆ ಈ ತಂಡ ರಚಿಸಲಾಗಿದೆ ಎಂದು ತಿಳಿಸಲಾಗಿದೆ. 

ಉಪಕರಣದ ಗುಣಮಟ್ಟ, ಸುರಕ್ಷತೆ, ಕಾರ್ಯಪದ್ಧತಿಯ ತಪಾಸಣೆ, ದಾಖಲೆಗಳ ಪರಿಶೀಲನೆ ಹಾಗೂ ತಪಾಸಣಾ ವರದಿ ಸಿದ್ಧಪಡಿಸಿ ಸಲ್ಲಿಸುವ ಜವಾಬ್ದಾರಿಯನ್ನು ತಂಡ ಹೊಂದಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.