ADVERTISEMENT

ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:42 IST
Last Updated 4 ಜುಲೈ 2019, 20:42 IST
ಡಿಜಿಟಲ್ ಲಾಕ್‌ ಅನ್ನು ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಬಿ.ಸತ್ಯನಾರಾಯಣ ವಿತರಿಸಿದರು. ಕೆಎಸ್‌ಆರ್‌ಟಿಸಿ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ, ಮುಖ್ಯ ಯಾಂತ್ರಿಕ ಎಂಜಿನಿಯರ್ ಕೆ.ರಾಮಮೂರ್ತಿ, ಬಿಪಿಸಿಎಲ್ ಪ್ರಾಂತ್ಯ ವ್ಯವಸ್ಥಾಪಕ ಮೇಜರ್ ಶಂಕರ್ ಕರಜಗಿ ಇದ್ದಾರೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಇಂಧನ ಪೂರೈಸುವ ಡೀಸೆಲ್ ಟ್ಯಾಂಕರ್‌ಗಳಿಗೆಡಿಜಿಟಲ್ ಲಾಕಿಂಗ್‌ ವ್ಯವಸ್ಥೆ ಅಳವಡಿಕೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಸಹಯೋಗದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಜಿಪಿಎಸ್‌ ಆಧಾರಿತ ಲಾಕಿಂಗ್ ವ್ಯವಸ್ಥೆ ಇದಾಗಿದ್ದು, ಬಿಪಿಸಿಎಲ್‌ನಲ್ಲಿ ಇಂಧನ ತುಂಬಿಸಿದ ನಂತರ ನಿಗಮಕ್ಕೆ ಬರುವ ತನಕ ಸಾಗಣೆ ಹಂತದಲ್ಲಿ ಇಂಧನ ಸೋರಿಕೆ ಆಗುವುದನ್ನು ತಡೆಯಬಹುದು. ನಿಗಮದ ಡಿಪೋಗೆ ಬಂದ ನಂತರ ಒಟಿಪಿ ತಾಳೆಯಾದರೆ ಮಾತ್ರ ಟ್ಯಾಂಕರ್‌ನ ಮುಚ್ಚಳ ತೆರೆಯಲು ಸಾಧ್ಯವಾಗಲಿದೆ.

ಲಾಕಿಂಗ್ ಸಿಸ್ಟಂ ಅಳವಡಿಸುವ ಕಾರ್ಯಾಗಾರ ಉದ್ಘಾಟಿಸಿದ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ, ‘ಕೆಎಸ್‌ಆರ್‌ಟಿಸಿ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದು, ಈ ಲಾಕಿಂಗ್ ವ್ಯವಸ್ಥೆ ಕೂಡ ಮೊದಲು ಅಳವಡಿಸಿಕೊಂಡ ಸಾರಿಗೆ ಸಂಸ್ಥೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.