ADVERTISEMENT

'2024ನೇ ವರ್ಷ ಪ್ರಯಾಣಿಕ ಸ್ನೇಹಿ ವರ್ಷ’: ಕೆಎಸ್‌ಆರ್‌ಟಿಸಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 16:21 IST
Last Updated 2 ಜನವರಿ 2024, 16:21 IST
ವಿ. ಅನ್ಬು ಕುಮಾರ್
ವಿ. ಅನ್ಬು ಕುಮಾರ್   

ಬೆಂಗಳೂರು: ಕೆಎಸ್‌ಆರ್‌ಟಿಸಿ 2024ನೇ ವರ್ಷವನ್ನು ‘ಪ್ರಯಾಣಿಕ ಸ್ನೇಹಿ ವರ್ಷ’ ಎಂದು ಘೋಷಣೆ ಮಾಡಿದೆ. 

‘ಪ್ರಯಾಣಿಕ ಸ್ನೇಹಿ’ ವರ್ಷದಲ್ಲಿ 2,000 ಹೊಸ ವಾಹನಗಳು ಸೇರ್ಪಡೆಗೊಳ್ಳಲಿವೆ. ‘ನಮ್ಮ ಕಾರ್ಗೊ ಟ್ರಕ್‌’ಗಳನ್ನು 20ರಿಂದ 500ಕ್ಕೆ ಏರಿಸಲಾಗುವುದು. 1,000 ವಾಹನಗಳಿಗೆ ಪುನಶ್ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನ ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ವಿಟಿಎಂಎಸ್‌, ಮೊಬೈಲ್‌ ಆ್ಯಪ್‌, ನಗದು ರಹಿತ ಸೇವೆಗೆ ಆದ್ಯತೆ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಚಾಲನಾ ಸಿಬ್ಬಂದಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT