ಬೆಂಗಳೂರು: ‘ರಾಜಕೀಯ ಕಾರಣಕ್ಕೆ ಆರ್‌ಎಸ್‌ಎಸ್ ದೂಷಿಸುವುದನ್ನು ಬಿಟ್ಟು ಸಂಘದ ಶಾಖೆಗೆ ಬಂದು ಅಲ್ಲಿನ ಸಿದ್ಧಾಂತಗಳನ್ನು ಅಧ್ಯಯನ ಮಾಡಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
‘ಆರ್‌ಎಸ್‌ಎಸ್ ಬದ್ಧತೆಯ ಬಗ್ಗೆ ಮಾತನಾಡುವ ಮೊದಲು ಆರ್‌ಎಸ್‌ಎಸ್ ಎಂದರೇನು, ಅದರ ಮಹತ್ವ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಬಂದಾಗ ಜನರ ಸಂಕಷ್ಟಗಳು ನಿಮಗೆ ನೆನಪಾಗುವುದು ಹೊಸದೇನೂ ಅಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತರು ಸಂಕಷ್ಟದ ಜನರ ಮಧ್ಯೆಯೇ ಬೆಳೆದು ಬಂದವರು. ಜನರ ನೋವುಗಳು ಏನೆಂಬ ಅರಿವಿದೆ. ಸೈನಿಕರ ಬಗ್ಗೆ, ಆರ್‌ಎಸ್‌ಎಸ್ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿರುವ ಅವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.