ADVERTISEMENT

ನೆರೆ ಪರಿಹಾರ: ಶಾ ಬಾಯಿ ಬಿಡಲಿ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 5:49 IST
Last Updated 18 ಜನವರಿ 2020, 5:49 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶನಿವಾರದ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಸಿಎಎ ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲಿ’ ಎಂದು ಸಲಹೆ ನೀಡಿದ್ದಾರೆ.

‘ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಿರುವ ಹಣಕಾಸು ನೆರವಿನ ಬಗ್ಗೆ ತುಟಿಬಿಚ್ಚದೆ, ನೆರೆ ಸಂತ್ರಸ್ತರ ಗೋಳು ಕೇಳದ ಕೇಂದ್ರ-ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಅಭಿಯಾನ ನಡೆಸುವಮೂಲಕ ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು' ಎಂದು ಟೀಕಿಸಿದ್ದಾರೆ.

ADVERTISEMENT

‘ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ ಜಾಗರಣೆ ಮಾಡುತ್ತಿದ್ದಾರೆ. ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ’ ಎಂದು
ಕಟಕಿಯಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.