ADVERTISEMENT

ಮಹಿಳೆ ಮೇಲೆ ಬೀದಿ ನಾಯಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:13 IST
Last Updated 19 ನವೆಂಬರ್ 2018, 20:13 IST

ಬೆಂಗಳೂರು: ಲಾಲ್‌ಬಾಗ್‌ನ ಸಿದ್ದಾಪುರದಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ.

‘ಮನೆಯಿಂದ ಹೊರಬಂದ ಕೂಡಲೇ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದವು. ಕೈ, ಕಾಲುಗಳಲ್ಲಿ ಗಾಯ ಆಗಿದೆ’ ಎಂದು ಗಾಯಾಳು ಗೀತಾ ಹೇಳಿದರು.

ಶುಕ್ರವಾರ ಬೀದಿನಾಯಿ ದಾಳಿ ನಡೆಸಿದ್ದವು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ADVERTISEMENT

‘ಬೀದಿನಾಯಿಗಳ ಕಾಟ ಹೆಚ್ಚಿದೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗಲು ಭಯ ಆಗುತ್ತದೆ. ಸ್ಥಳೀಯರು ಸಹಾಯ ಮಾಡದಿದ್ದರೆ ನಾಯಿಗಳು ನನ್ನನ್ನು ತಿಂದೇ ಬಿಡುತ್ತಿದ್ದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.