ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳ ಅಭಿವೃದ್ಧಿಗಾಗಿ ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಖಂಡಿಸಿ ಇದೇ 25ಕ್ಕೆ ಚನ್ನರಾಯಪಟ್ಟಣದ ಕೆಐಎಡಿಬಿ ಭೂ ಸ್ವಾಧೀನ ಹೋರಾಟ ಸಮಿತಿಯವರು ಕರೆ ನೀಡಿರುವ ‘ದೇವನಹಳ್ಳಿ ಚಲೋ’ ಹೋರಾಟವನ್ನು ಸಂಯಕ್ತ ಹೋರಾಟ–ಕರ್ನಾಟಕ ಬೆಂಬಲಿಸುತ್ತಿದೆ.
‘ರಾಜ್ಯದ ಎಲ್ಲ ಭಾಗಗಳಿಂದ ನೂರಾರು ರೈತರು, ಚಳವಳಿಕಾರರು ಈ ಹೋರಾಟದಲ್ಲಿ ಪಾಲ್ಗೊಳ್ಳಲು ದೇವನಹಳ್ಳಿಗೆ ಬರುತ್ತಿದ್ದಾರೆ. ತಾಲ್ಲೂಕು ಕಚೇರಿ ಎದುರು ಆರಂಭವಾಗಲಿರುವ ಹೋರಾಟವು ರೈತರ ನ್ಯಾಯಬದ್ಧ ಬೇಡಿಕೆಗಳು ಈಡೇರುವವರಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಸಂಯುಕ್ತ ಹೋರಾಟ– ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯಂತ ಫಲವತ್ತಾದ ಸಮೃದ್ಧವಾಗಿ ಬೆಳೆ ಬೆಳೆಯುವ ನೀರಾವರಿ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವುದರ ಔಚಿತ್ಯವನ್ನು ‘ಸಂಯುಕ್ತ ಹೋರಾಟ–ಕರ್ನಾಟಕ’ ಸಂಘಟನೆ ಪ್ರಶ್ನಿಸಿದ್ದು, ರೈತರಿಗೆ ಮತ್ತು ಹೋರಾಟಗಾರರಿಗೆ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.