ADVERTISEMENT

ದೊರಕದ ಭೂ ಪರಿಹಾರ; ರಸ್ತೆ ವಿಸ್ತರಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 20:21 IST
Last Updated 31 ಮಾರ್ಚ್ 2023, 20:21 IST
ಪದ್ಮಶ್ರೀ ಕಾಲೇಜು ಬಳಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುವ ಬಿಡಿಎ ಸಿಬ್ಬಂದಿ ಮತ್ತು ಪೊಲೀಸರು
ಪದ್ಮಶ್ರೀ ಕಾಲೇಜು ಬಳಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುವ ಬಿಡಿಎ ಸಿಬ್ಬಂದಿ ಮತ್ತು ಪೊಲೀಸರು   

ಕೆಂಗೇರಿ: ಪರಿಹಾರ ನೀಡದೆ ಭೂಸ್ವಾಧೀನಕ್ಕಾಗಿ ಪದ್ಮಶ್ರೀ ಶಿಕ್ಷಣ ಸಂಸ್ಥೆಯ ಅಂಗಳಕ್ಕೆ ಹೋಗಿದ್ದ ಬಿಡಿಎ ಅಧಿಕಾರಿಗಳು ವಾಪಸ್ಸಾದರು.

ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯ ಹೊಸಬೈರೋಹಳ್ಳಿ ಗ್ರಾಮದಲ್ಲಿ ಪದ್ಮಶ್ರೀ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಾಗಡಿ ರಸ್ತೆ – ಮೈಸೂರು ರಸ್ತೆ ನಿರ್ಮಾಣಕ್ಕಾಗಿ ಕಾಲೇಜಿನ ಕೆಲ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲು 2013ರಲ್ಲಿ ಗುರುತು ಮಾಡಲಾಗಿತ್ತು. ಪೊಲೀಸರ ನೆರವಿನೊಂದಿಗೆ ಜೆಸಿಬಿಯೊಡನೆ ಸ್ಥಳಕ್ಕೆ ಆಗಮಿಸಿದ ಬಿಡಿಎ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಮುಂದಾಗಿದ್ದರು.

‘ಬಿಡಿಎ ಈವರೆಗೆ ನೀಡಿರುವ ತಿಳಿವಳಿಕೆ ಪತ್ರಗಳಲ್ಲಿ ದೋಷವಿದೆ. ಸ್ವಾಧೀನಗೊಳ್ಳಲಿರುವ ಭೂಮಿಯ ಅಳತೆ
ಯಲ್ಲಿ ವ್ಯತ್ಯಾಸವಿದೆ’ ಎಂದು ದೂರಿದ್ದ ಕಾಲೇಜು ಆಡಳಿತ ಮಂಡಳಿ ಭೂ ಪರಿಹಾರ ದೊರಕುವವರೆಗೆ ಯಾವುದೇ ರಸ್ತೆ ಅಭಿವೃದ್ಧಿ ಕೈಗೊಳ್ಳದಂತೆ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ಹೊರ ನಡೆದಿದ್ದಾರೆ.

ADVERTISEMENT

ಬಿಡಿಎ ಎಇಇ ಅಶೋಕ್ ಪ್ರತಿಕ್ರಿಯಿಸಿ, ರಸ್ತೆ ವಿಸ್ತರಣೆ ಕಾಮಗಾರಿ ಚಾಲ್ತಿಯಲ್ಲಿದೆ. ಉರುಳಿಸಿರುವ ಗೋಡೆಯನ್ನು ಮತ್ತೆ ನಿರ್ಮಾಣ ಮಾಡಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.