ADVERTISEMENT

ಹೃದಯದಿಂದ ಬರೆಯುತ್ತಿದ್ದ ಲಂಕೇಶ್: ಶಿವರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 17:53 IST
Last Updated 2 ಅಕ್ಟೋಬರ್ 2020, 17:53 IST
ನಟ ಶಿವರಾಜ್‌ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ನಿರ್ಮಲಾನಂದನಾಥ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇಂದ್ರಜಿತ್ ಲಂಕೇಶ್‌ ಇದ್ದಾರೆ
ನಟ ಶಿವರಾಜ್‌ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ನಿರ್ಮಲಾನಂದನಾಥ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇಂದ್ರಜಿತ್ ಲಂಕೇಶ್‌ ಇದ್ದಾರೆ   

ಬೆಂಗಳೂರು:‘ಎಂಬತ್ತರ ದಶಕದಲ್ಲಿ ನಾನು ಚಿತ್ರರಂಗ ಪ್ರವೇಶಿಸಿದಾಗ ನನಗೆ ಗೊತ್ತಿದ್ದ ಬೆರಳೆಣಿಕೆಯ ಪತ್ರಕರ್ತರಲ್ಲಿ ಪಿ. ಲಂಕೇಶ್ ಒಬ್ಬರು. ಬರಹಗಾರನಲ್ಲಿ ಪ್ರೀತಿಸುವ ಗುಣವಿರಬೇಕು. ಅಂತಹ ಗುಣ ಹೊಂದಿದ್ದ ಅವರು ಹೃದಯದಿಂದ ಬರೆಯುತ್ತಿದ್ದರು’ ಎಂದು ಚಿತ್ರನಟ ಶಿವರಾಜ್‌ಕುಮಾರ್ ಹೇಳಿದರು.

ಗಾಂಧಿಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಲಂಕೇಶ್‌ ಪತ್ರಿಕೆಯ 41ನೇ ಸಂಪುಟ ಬಿಡುಗಡೆ ಮಾಡಿ ಮಾತನಾಡಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಲಂಕೇಶ್ ಉದಾಹರಣೆ. ಅವರು ಸವ್ಯಸಾಚಿ ಬರಹಗಾರ. ಅವರನ್ನು ಸರಿಯಾಗಿ ಓದಿದರೆ ನಮ್ಮೊಳಗಿನ ಸಾಧ್ಯತೆಗಳ ಅರಿವು ನಮಗಾಗುತ್ತದೆ’ ಎಂದರು.

ADVERTISEMENT

ಲಂಕೇಶರ ಬರಹ, ವಿಚಾರ ಹಾಗೂ ಅವರ ಬಗ್ಗೆ ಗಣ್ಯರು ಹೊಂದಿರುವ ಅಭಿಪ್ರಾಯಗಳಿರುವ ಆಡಿಯೊ ಬುಕ್ ಹಾಗೂ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.