ಬೆಂಗಳೂರು: ಬಸವನಗುಡಿ ರಾಮಕೃಷ್ಣ ಮಠದ ವತಿಯಿಂದ ಆಯೋಜಿಸಿರುವ ಮೂರು ದಿನಗಳ 'ರಾಮಕೃಷ್ಣ ಸಂಗೀತ ಸೌರಭ' ಸಂಗೀತೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಆಶ್ರಮದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ದತ್ತಾತ್ರೇಯ ಎಲ್. ವೇಲಣಕರ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಸಿಕೊಟ್ಟರು. ಯಮನ್ ರಾಗದಲ್ಲಿ ಕಛೇರಿ ಪ್ರಾರಂಭಿಸಿ, ಬಳಿಕ ದರ್ಬಾರಿ ಕಾನಡ ರಾಗ ಪ್ರಸ್ತುತಪಡಿಸಿದರು. ಅವರಿಗೆ ತಬಲಾದಲ್ಲಿ ಯೋಗೀಶ್ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಸತ್ಯಜಿತ್ ಸಂಜು ಸಮರ್ಥ ಸಾಥ್ ನೀಡಿದರು.
ಶನಿವಾರ ವಿದ್ವಾನ್ ಅಮಿತ್ ನಾಡಿಗ್ ಮತ್ತು ವಿದ್ವಾನ್ ಷಡಜ್ ಗೋಡ್ಖಿಂಡಿ ಅವರು ಹಿಂದೂಸ್ತಾನಿ- ಕರ್ನಾಟಕ ಕೊಳಲು ಜುಗಲಬಂದಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಅವರಿಗೆ ಮೃದಂಗದಲ್ಲಿ ವಿದ್ವಾನ್ ಅರ್ಜುನ್ ಕುಮಾರ್ ಹಾಗೂ ತಬಲಾದಲ್ಲಿ ವಿದ್ವಾನ್ ರೂಪಕ್ ಕಲ್ಲೂರ್ಕರ್ ಸಾಥ್ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.