ADVERTISEMENT

ಹುಲಿ ಸಂರಕ್ಷಣೆಯ ಪಾಠ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:45 IST
Last Updated 5 ಮೇ 2019, 19:45 IST
1200 ರೂಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸಿ ಅದರಲ್ಲಿ ಹುಲಿ ಚಿತ್ರವನ್ನು ರೂಪಿಸಿದ ನಾಗರಿಕರು–ಪ್ರಜಾವಾಣಿ ಚಿತ್ರ
1200 ರೂಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸಿ ಅದರಲ್ಲಿ ಹುಲಿ ಚಿತ್ರವನ್ನು ರೂಪಿಸಿದ ನಾಗರಿಕರು–ಪ್ರಜಾವಾಣಿ ಚಿತ್ರ   

ಬೆಂಗಳೂರು:ಬನ್ನೇರುಘಟ್ಟ ರಸ್ತೆಯ ಗೋಪಾಲನ್‌ ಮಾಲ್‌ ಬಳಿ300ಕ್ಕೂ ಹೆಚ್ಚು ಜನ ಭಾನುವಾರ ರೂಬಿಕ್‌ ಕ್ಯೂಬ್‌ಗಳನ್ನು ಚಾಕಚಕ್ಯತೆಯಿಂದ ಜೋಡಿಸಿ ಅದರಲ್ಲಿ ಹುಲಿ ಚಿತ್ರವನ್ನು ರೂಪಿಸಿ,ಹುಲಿ ಸಂರಕ್ಷಣೆ ಮಹತ್ವ ಸಾರಿದರು. ಈ ಮೂಲಕ ಗಿನ್ನೆಸ್‌ ದಾಖಲೆಗೆ ಯತ್ನಿಸಿದರು.

ನಗರದ ರೂಬಿಕ್‌ ಕ್ಯೂಬ್‌ತರಬೇತುದಾರ ಕೆ.ಪೃಥ್ವೀಶ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲ ಭಾಗವಹಿಸಿದ್ದರು.

‘ಏಪ್ರಿಲ್‌ನಿಂದರೂಬಿಕ್‌ ಕ್ಯೂಬ್‌ ಆಡಲು ಪ್ರಾರಂಭಿಸಿದ್ದೇನೆ. ಇದರಿಂದ ತೊಡಕು ಪರಿಹರಿಸುವದನ್ನು ಕಲಿತಿದ್ದೇನೆ. ಆದರೆ, ಇಂಥ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು’ ಎಂದು ಏಳು ವರ್ಷದ ಬಾಲಕಿ ನವ್ಯಾ ರಮೇಶ್‌ ಆಚಾರ್ಯ ಹೇಳಿದಳು.

ADVERTISEMENT

‘ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಬೆಂಗಳೂರು ನಿವಾಸಿ ಕಾರ್ತಿಕ್‌ ಸತ್ಯಮೂರ್ತಿ ತಿಳಿಸಿದರು.

2016ರಲ್ಲಿಕೆ.ಪೃಥ್ವೀಶ್‌ ಹಾಗೂ ಸ್ನೇಹಿತರು ಸೇರಿ ಎರಡು ಬದಿಯರೂಬಿಕ್‌ ಕ್ಯೂಬ್‌ ಸೃಷ್ಟಿಸಿ, ಒಂದು ಬದಿಚಾರ್ಲಿ ಚಾಪ್ಲಿನ್ ಹಾಗೂ ಮತ್ತೊಂದು ಬದಿ ಮಿಸ್ಟರ್‌ ಬಿನ್‌ ಚಿತ್ರವನ್ನು ರೂಪಿಸಿದ್ದರು. ಈ ಮೂಲಕ ಅವರು ಗಿನ್ನೆಸ್‌ ದಾಖಲೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.